ಕನಕಗಿರಿ 16ನೇ ವಾರ್ಡಿನ ಮಲಿಯಮ್ಮ ದೇವಸ್ಥಾನ ಬಳಿ ಅಕ್ರಮ ಮದ್ಯ ಮಾರಾಟ ಹಾಗೂ ಸೇವನೆ ಖಂಡಿಸಿ ಮಹಿಳೆಯರು ಸೋಮವಾರ ಪ್ರತಿಭಟನೆ ನಡೆಸಿದರು. ನಿವಾಸಿಗಳಾದ ಸಾವಿತ್ರಮ್ಮ, ಶಿವಮ್ಮ, ಲಕ್ಷ್ಮೀ, ದೂಡ್ಡಲಕ್ಷ್ಮೀ, ದುರಗಮ್ಮ,ರೇಣುಕಾ, ದೀಪಮ್ಮ, ಹುಲಿಗೆಮ್ಮ ಇದ್ದರು. 
ಕೊಪ್ಪಳ

ದೇಗುಲ ಬಳಿ ಮದ್ಯ ಮಾರಾಟ ನಿಲ್ಲಲಿ

ಕನಕಗಿರಿ: ಶ್ರೀ ಮಲಿಯಮ್ಮ ದೇವಸ್ಥಾನ ಬಳಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ಹಾಗೂ ಸಾರ್ವಜನಿಕ ಸ್ಥಳದಲ್ಲೇ ಬಹಿರಂಗ ಸೇವನೆಗೆ ಸ್ಥಳೀಯರು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲವರು ದೇವಸ್ಥಾನ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯ ಸೇವನೆ ಮಾಡಿ ಗಲಾಟೆ, ಅಸಭ್ಯ ವರ್ತನೆ ತೋರುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಭಯದಿಂದ ಓಡಾಡುವಂತಾಗಿದೆ.
ಇದರಿಂದ ದೇವಸ್ಥಾನದ ಪಾವಿತ್ರೃ ಹಾಳಾಗುತ್ತಿದೆ. ಇದಕ್ಕೆ ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕೆಂದು ನಿವಾಸಿಗಳಾದ ಶಿಲ್ಪಾ, ಪದ್ದಮ್ಮ, ಸಿದ್ದಲಿಂಗಮ್ಮ, ಅಯ್ಯಮ್ಮ, ಗೌರಮ್ಮ, ಚಾಂದಿನಿ ಬೇಗಂ, ಸಾವಿತ್ರಮ್ಮ, ಶಿವಮ್ಮ, ಲಕ್ಷ್ಮೀ, ದೂಡ್ಡಲಕ್ಷ್ಮೀ, ದುರಗಮ್ಮ, ರೇಣುಕಾ, ದೀಪಮ್ಮ, ಹುಲಿಗೆಮ್ಮ ಇತರರು ಒತ್ತಾಯಿಸಿದ್ದಾರೆ.