ಕನಕಗಿರಿ ತಾಲೂಕಿನ ಮಲ್ಲಿಗೆವಾಡ ಗ್ರಾಮದಲ್ಲಿ ದಿಂಡಿನ ಮೇಲೆ ಉಸುಕಿನ ಚೀಲ ಎಳೆಯುವ ಸ್ಪರ್ಧೆಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ, ಮುಖಂಡ ಶರಣಪ್ಪ ನವಲಳ್ಳಿ ಚಾಲನೆ ನೀಡಿದರು. ಶರಣಪ್ಪ ಹೆಬ್ಬುಲಿ, ತಿರುಪತಿ ಏಳುಬೆಂಚಿ, ರಾಮಸ್ವಾಮಿ ವಾಲೇಕಾರ ಇತರರಿದ್ದರು.
- ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಬೇಸರ
ಕನಕಗಿರಿ: ನಶಿಸುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಯುವ ಜನತೆ ಉಳಿಸಿ ಬೆಳೆಸಬೇಕಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಹೇಳಿದರು.
ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನ ಮಲ್ಲಿಗೆವಾಡ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎತ್ತುಗಳಿಂದ ದಿಂಡಿನ ಮೇಲೆ ಉಸುಕಿನ ಚೀಲ ಎಳೆಸುವ ಸ್ಪರ್ಧೆಯಲ್ಲಿ ಮಾತನಾಡಿದರು.
ಮೊಬೈಲ್, ಟಿವಿ ಆಕರ್ಷಣೆಯಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗಿವೆ. ಕೃಷಿಯಲ್ಲಿ ಯಾಂತ್ರೀಕರಣದಿಂದ ಎತ್ತುಗಳ ಸಂಖ್ಯೆ ಕಡಿಮೆಯಾಗಿವೆ. ಎತ್ತುಗಳ ಮೂಲಕ ಮರಳಿನ ಚೀಲ ಎಳೆಯುವ ಸ್ಪರ್ಧೆ ಮೂಲಕ ಗ್ರಾಮೀಣ ಭಾಗದ ಸೊಗಡನ್ನು ಮುಂದುವರೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪ್ರಮುಖರಾದ ಶರಣಪ್ಪ ನವಲಳ್ಳಿ, ಮುದಿಯಪ್ಪ ನಾಯಕ ಸ್ಪರ್ಧೆಗೆ ಚಾಲನೆ ನೀಡಿದರು. 23 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ್, ಶರಣಪ್ಪ ಹೆಬ್ಬುಲಿ, ತಿರುಪತಿ ಏಳುಬೆಂಚಿ, ರಾಮಸ್ವಾಮಿ ವಾಲೇಕಾರ, ಹುಸೇನ ಸಾಬ್ ಗೋರಳ್ಳಿ, ಶರಣಪ್ಪ ಹಳೇಮನಿ, ಜಗದೀಶ, ವೆಂಕೋಬ ಕುಂಬಾರ, ಸಕ್ರಗೌಡ ಪೋಪಾ, ದುರ್ಗನಗೌಡ, ದೇವಪ್ಪ ತೋಳದ, ವೆಂಕೋಬ ಏಳುಬೆಂಚಿ ಇತರರಿದ್ದರು.
ವಡಕಿ ಗ್ರಾಮದ ಪವಾಡೆಗೌಡ ಅವರಎತ್ತುಗಳು (ಪ್ರಥಮ), ಮಲ್ಲಿಗೆವಾಡ ಗ್ರಾಮದ ದೇವಪ್ಪ ಕರೇಕುರಿ ಅವರ ಎತ್ತುಗಳು (ದ್ವಿತೀಯ), ಮಲ್ಲಿಗೆವಾಡದ ಬಸವರಾಜ ಕನಕಗಿರಿ ಅವರ ಎತ್ತುಗಳು (ತೃತೀಯ) ಸ್ಥಾನ ಪಡೆದುಕೊಂಡವು.