- ಕೇಂದ್ರದ ವಿದೇಶಾಂಗ ನೀತಿ ಸರಿ ಇದೆ
- ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಸಮರ್ಥನೆ
ಕೊಪ್ಪಳ: ಕಾಂಗ್ರೆಸ್ ನಾಯಕರು ಮಧ್ಯಪ್ರಾಚ್ಯ ಯುದ್ಧ ಸಮಯದ ಪರಿಸ್ಥಿತಿ ನಿಭಾಯಿಸುವಲ್ಲಿ ಪ್ರಧಾನಿ ಮೋದಿ ಎಡವಿದ್ದಾರೆ ಎಂದು ಮುಗಿಬಿದ್ದಿದ್ದಾರೆ. ಆದರೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕೇಂದ್ರ ವಿದೇಶಾಂಗ ನೀತಿಗೆ ುಲ್ ಮಾರ್ಕ್ಸ್ ನೀಡಿದ್ದಾರೆ !
ಹೌದು, ಮಧ್ಯಪ್ರಾಚ್ಯ ಯುದ್ಧ ವಿಷಯದಲ್ಲಿ ಕೇಂದ್ರದ ವಿದೇಶಾಂಗ ನೀತಿ ಸರಿಯಾಗಿಯೇ ಇದೆ. ಮೊದಲಿನಿಂದಲೂ ನಮ್ಮ ದೇಶ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಮುಂದುವರೆಸಿಕೊಂಡು ಬಂದಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಶುಕ್ರವಾರ ಸಮರ್ಥಿಸಿಕೊಂಡರು.
ಹಾಮೋರ್ಜ್ ಜಲಸಂಧಿ ಮುಕ್ತವಾಗಿದ್ದು, ಇದಕ್ಕೆ ನಮ್ಮ ದೇಶದ ವಿದೇಶಾಂಗ ನೀತಿ ಕಾರಣ. ಆದರೆ, ನಿರ್ವಹಣೆ ಮಾಡುವಲ್ಲಿ ಸ್ವಲ್ಪ ತಪು$್ಪಗಳಾಗಿವೆ. ಈ ಜಲಸಂಧಿ ಮುಕ್ತವಾಗಿರುವುದು ಆರ್ಥಿಕ ಚಟುವಟಿಕೆಗಳಿಗೆ ಬಲ ನೀಡಿದೆ. ಎಂಟು ದೇಶಗಳು ಇದೇ ಮಾರ್ಗವಾಗಿ ತೈಲ ಸಬರಾಜು ಮಾಡುತ್ತವೆ. ಯುದ್ಧ ಕಾರಣ ಸ್ವಲ್ಪ ತೊಂದರೆ ಆಗಿರುವುದು ನಿಜ. ಪೆಟ್ರೋಲ್ ದರ ಏರಿಕೆಯಾಗಿದ್ದು ಸಹಜವಾಗಿ ಹೆಚ್ಚಳವಾಗಲಿದೆ ಎಂದರು. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ವಿದೇಶಾಂಗ ನೀತಿ ಬಗ್ಗೆ ಕಾಂಗ್ರೆಸ್ ನಾಯಕರು ನಿರಂತರ ಟೀಕೆ ಮಾಡುತ್ತಿದ್ದಾರೆ. ಇತ್ತ ರಾಯರಡ್ಡಿ ಉತ್ತಮವಾಗಿದೆ ಎನ್ನುವ ಮೂಲಕ ತಮ್ಮದೇ ನಾಯಕರ ಹೇಳಿಕೆಗೆ ಪರೋಕ್ಷ ಟಾಂಗ್ ನೀಡಿದರು.