ಮುನಿರಾಬಾದ್ ಸಮೀಪದ ಬಸಾಪುರ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದ ಕಾಂಕ್ರಿಟ್ ರಸ್ತೆ ಕುಸಿದಿರುವುದು. 
ಕೊಪ್ಪಳ

ಭಾರಿ ವಾಹನಗಳ ಸಂಚಾರದಿಂದ ರಸ್ತೆ ಹಾಳು

ಪ್ರಮುಖ ಮುಖ್ಯಾಂಶಗಳು

  • ಜಮೀನುಗಳಿಗೆ ತೆರಳಲು ರೈತರಿಗೆ ಸಂಕಷ್ಟ
ಮುನಿರಾಬಾದ್: ಸಮೀಪದ ಬಸಾಪುರ ಗ್ರಾಮದ ತುಂಗಭದ್ರಾ ಎಡದಂಡೆ ಕಾಲುವೆ ಪಕ್ಕದ ಕಾಂಕ್ರಿಟ್ ರಸ್ತೆ ಭಾರಿ ವಾಹನಗಳ ಅತಿಯಾದ ಸಂಚಾರದಿಂದ ಸಂಪೂರ್ಣ ಕುಸಿದಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಬಸಾಪುರ ಎಡದಂಡೆ ಕಾಲುವೆಯ ಪಕ್ಕದಲ್ಲಿರುವ ಬೆಟ್ಟದಿಂದ ನಿಯಮಬಾಹಿರವಾಗಿ ನಡೆಯುತ್ತಿರುವ ಬೃಹತ್ ಕಲ್ಲು ಮತ್ತು ಮರಂ ಸಾಗಣೆಯೇ ರಸ್ತೆ ಹಾಳಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಈ ಮಾರ್ಗವಾಗಿ ಸಂಚರಿಸುವ ಭಾರಿ ತೂಕದ ವಾಹನಗಳ ಒತ್ತಡಕ್ಕೆ ಸಿಲುಕಿ ಕಾಂಕ್ರಿಟ್ ರಸ್ತೆ ಬಿರುಕು ಬಿಟ್ಟು ತುಂಡಾಗಿದೆ. ಇದರಿಂದ ಬಸಾಪುರ ಮತ್ತು ಸುತ್ತಲಿನ ಗ್ರಾಮಗಳ ರೈತರು ಜಮೀನುಗಳಿಗೆ ತೆರಳಲು ಪರದಾಡುವಂತಾಗಿದೆ. ಕಾಲುವೆ ಪಕ್ಕದ ರಸ್ತೆ ಹದಗೆಡುತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಬಸಾಪುರ ಹಾಗೂ ಬಂಡಿಹರ್ಲಾಪುರ ಗ್ರಾಮಸ್ಥರು ಆರೋಪಿಸಿದ್ದಾರೆ.