ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳ ನುಡಿನಮನ ಕಾರ್ಯಕ್ರಮದ ದಾಸೋಹಕ್ಕೆ ತಾಲೂಕು ಕುರುಬ ಸಮಾಜದಿಂದ 75ಕ್ವಿಂಟಾಲ್ ಅಕ್ಕಿಯನ್ನು ಶುಕ್ರವಾರ ಕಳುಹಿಸಲಾಯಿತು. ಪ್ರಮುಖರಾದ ಹನುಮಂತಪ್ಪ ಶಾಲಿಗನೂರು, ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶರಣೇಶ ಸಾಲೋಣಿ, ಡಾ. ಶರಣಪ್ಪ ಮಾವಿಮಡಗು ಇತರರಿದ್ದರು.
- ಕಾರಟಗಿ ತಾಲೂಕು ಕುರುಬ ಸಮಾಜದಿಂದ ಸಮರ್ಪಣೆ
ಕಾರಟಗಿ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಫೆ.1ರಂದು ತಿಂಥಿಣಿ ಬ್ರಿಡ್ಜ್‌ನಲ್ಲಿ ಹಮ್ಮಿಕೊಂಡಿರುವ ನುಡಿನಮನ ಕಾರ್ಯಕ್ರಮದ ದಾಸೋಹಕ್ಕೆ ತಾಲೂಕು ಕುರುಬ ಸಮಾಜದಿಂದ 75 ಕ್ವಿಂಟಾಲ್ ಅಕ್ಕಿಯನ್ನು ಶುಕ್ರವಾರ ರವಾನಿಸಲಾಯಿತು.
ಕುರುಬರ ಸಂಘದ ತಾಲೂಕಾಧ್ಯಕ್ಷ ಉಮೇಶ ಭಂಗಿ, ವಕೀಲ ರಾಮಚಂದ್ರ ದೇವರಗುಡಿ ಮಾತನಾಡಿ, ಪ್ರತಿ ವರ್ಷ ತಿಂಥಿಣಿ ಬ್ರಿಡ್ಜ್‌ನಲ್ಲಿ ಸಂಕ್ರಾಂತಿ ದಿನದಂದು 3 ದಿನಗಳ ಕಾಲ ನಡೆಯುತ್ತಿದ್ದ ಹಾಲುಮತ ಸಂಸ್ಕೃತಿ ವೈಭವಕ್ಕೆ ಅಕ್ಕಿ ಕಳುಹಿಸಿಕೊಡಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಯಕ್ರಮದ ರೂವಾರಿಗಳಾದ ಸಿದ್ದರಾಮಾನಂದ ಶ್ರೀಗಳೇ ನಮ್ಮಿಂದ ಕಣ್ಮರೆಯಾಗಿದ್ದಾರೆ. ಅವರ ಅಕಾಲಿಕ ಅಗಲಿಕೆ ಹಾಲುಮತ ಸಮಾಜವಲ್ಲದೇ ಇಡೀ ನಾಡಿಗೆ ತುಂಬಲಾರದ ನಷ್ಟವಾಗಿದೆ. ಹೀಗಾಗಿ ಫೆ.1ರಂದು ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಡಿನ ಹಲವು ಮಠಾಧೀಶರು, ಸಿಎಂ ಸೇರಿ ಕೇಂದ್ರ ಹಾಗೂ ರಾಜ್ಯ ಸಚಿವ ಸಂಪುಟ ಸಚಿವರು, ಸಂಸದರು, ಗಣ್ಯರು, ಸಾಹಿತಿಗಳು, ಕಲಾವಿದರು ಆಗಮಿಸುತ್ತಿದ್ದಾರೆ. ಅಲ್ಲದೇ, ನೆರೆಯ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು ಸೇರಿದಂತೆ ನಾನಾ ರಾಜ್ಯ, ಜಿಲ್ಲೆಗಳಿಂದ ಲಕ್ಷಾಂತರ ಜನರು ಆಗಮಿಸಲಿದ್ದು, ಮಹಾ ದಾಸೋಹಕ್ಕೆ ಭತ್ತದ ಕಣಜ ಕಾರಟಗಿಯಿಂದ 75 ಕ್ವಿಂಟಾಲ್ ಅಕ್ಕಿ ಕಳುಹಿಸಿಕೊಡಲಾಗುತ್ತಿದೆ ಎಂದರು.
ಸಮಾಜದ ಪ್ರಮುಖರಾದ ಹನುಮಂತಪ್ಪ ಶಾಲಿಗನೂರು, ನಿವೃತ್ತ ಪಿಎಸ್‌ಐ ಕೆ.ಮಲ್ಲಪ್ಪ, ಪುರಸಭೆ ಮಾಜಿ ಅಧ್ಯಕ್ಷ ಶರಣೇಶ ಸಾಲೋಣಿ, ಡಾ. ಶರಣಪ್ಪ ಮಾವಿಮಡಗು, ಹೊಳೆಯಪ್ಪ ದೇವರಮನಿ, ಲಿಂಗಪ್ಪ ಗೌರಿಪುರ, ಮಲ್ಲಯ್ಯ ಬೇವಿನಾಳ, ರಮೇಶ ಕುಂಟೋಜಿ, ಸಣ್ಣಲಿಂಗಪ್ಪ ರೌಡಕುಂದಿ, ಮರಿಯಪ್ಪ ಸಾಲೋಣಿ ಇತರರಿದ್ದರು.