ಗಂಗಾವತಿ ತಹಸೀಲ್ದಾರ್ ಯು.ವಸಂತಕುಮಾರಿಗೆ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ವಿಜಯ ಜಾಧವ್, ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಪಾಂಡು ನಾಯ್ಕ ಇತರರಿದ್ದರು.
ಗಂಗಾವತಿ: ನಗರದ ವಿರುಪಾಪುರ ತಾಂಡದ ನಿವಾಸಿಗಳನ್ನು ತೆರವುಗೊಳಿಸದಂತೆ ಒತ್ತಾಯಿಸಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ತಹಸೀಲ್ದಾರ್ ಯು.ವಸಂತಕುಮಾರಿಗೆ ಶನಿವಾರ ಮನವಿ ಸಲ್ಲಿಸಿದರು.
ಹಲವು ವರ್ಷಗಳಿಂದ ವಾಸಿಸುತ್ತಿರುವ ವಿರುಪಾಪುರ ತಾಂಡದ ನಿವಾಸಿಗಳ ಮನೆಗಳನ್ನು ಕೆರೆ ಒತ್ತುವರಿ ನೆಪದಲ್ಲಿ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ್ದು, 230ಕ್ಕೂ ಹೆಚ್ಚು ಕುಟುಂಬಗಳು ಆತಂಕಕ್ಕೊಳಗಾಗಿದ್ದರು. ಯಾವುದೇ ಕಾರಣಕ್ಕೂ ತೆರವುಗೊಳಿಸದಂತೆ ಒತ್ತಾಯಿಸಿ ನಿವಾಸಿಗಳೊಂದಿಗೆ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ವಿಜಯ ಜಾಧವ್ ಮಾತನಾಡಿ, 7 ದಶಕಗಳಿಂದಲೂ ವಿರುಪಾಪುರ ತಾಂಡದಲ್ಲಿ ಬಂಜಾರ ಸಮುದಾಯದ ಅತಿ ಹೆಚ್ಚಿನ ಜನರು ವಾಸಿಸುತ್ತಿದ್ದು, ಕೆರೆ ವ್ಯಾಪ್ತಿಯಿಂದ 1.5 ಕಿ.ಮೀ. ದೂರದಲ್ಲಿದ್ದಾರೆ. ಕೆರೆ ಪ್ರದೇಶ ಒತ್ತುವರಿ ನೆಪದಲ್ಲಿ ಏಕಾಏಕಿ ನೋಟಿಸ್ ಜಾರಿ ಮಾಡಿದ್ದು ಸರಿಯಲ್ಲ. ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸದಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಯು.ವಸಂತಕುಮಾರಿ ಮಾತನಾಡಿ, ತರಾತುರಿಯಲ್ಲಿ ಯಾವುದೇ ಕಾರಣಕ್ಕೂ ತೆರವುಗೊಳಿಸಲ್ಲ. ಪುನರ್ ಸರ್ವೇ ಕೈಗೊಳ್ಳಲಾಗುತ್ತಿದ್ದು,ಆತಂಕ ಪಡುವ ಅಗತ್ಯವಿ ಎಂದರು. ಜಿಲ್ಲಾಧ್ಯಕ್ಷ ಪಿ.ಲಕ್ಷ್ಮಣ ನಾಯ್ಕ, ಸದಸ್ಯ ವೆಂಕಟೇಶ್ ಚವ್ಹಾಣ್, ಶ್ರೀ ಸೇವಾಲಾಲ್ ಮಹಾರಾಜ ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಪಾಂಡು ನಾಯ್ಕ, ಪದಾಧಿಕಾರಿಗಳಾದ ಹನುಮಂತ ಜಾದವ್, ರವಿಚಂದ್ರ ,ರವಿ, ಕಷ್ಣ ನಾಯ್ಕ, ವೆಂಕಟೇಶ ಜಾದವ್, ಮಂಜುನಾಥ ಇತರರಿದ್ದರು.