ಪರವಾನಗಿ ಪಡೆಯದೇ ಮರಮ್ ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ತಾಲೂಕಿನ ಹಣವಾಳಗೆ ಎಸಿ ಕ್ಯಾ.ಮಹೇಶ ಮಾಲಗಿತ್ತಿ ನೇತೃತ್ವದ ತಾಲೂಕಾಡಳಿತ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು. ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಇತರರಿದ್ದರು. 
ಕೊಪ್ಪಳ

ಮರಳು ಅಕ್ರಮ ಸಾಗಣೆ ವರದಿ ನೀಡಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಸಾಗಣೆ
  • ವರದಿ

ಮರಳು ಅಕ್ರಮ ಸಾಗಣೆ ವರದಿ ನೀಡಿ

ಗಂಗಾವತಿ: ಪರವಾನಗಿ ಪಡೆಯದೇ ಮರಮ್ ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಣವಾಳಗೆ ಎಸಿ ಕ್ಯಾ.ಮಹೇಶ ಮಾಲಗಿತ್ತಿ ನೇತೃತ್ವದ ತಾಲೂಕಾಡಳಿತ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.
ಹಣವಾಳದ ಕೃಷಿ ಭೂಮಿ ಸೇರಿ ವಿವಿಧೆಡೆ ಮರಮ್‌ನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಸರ್ಕಾರಕ್ಕೆ ರಾಜಧನ ವಂಚಿಸಿದ್ದಾರೆ. ಭಾರಿ ವಾಹನಗಳ ಮೂಲಕ ಮರಮ್ ಸಾಗಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಂಡ ಪರಿಶೀಲಿಸಿ ಮಾಹಿತಿ ಪಡೆಯಿತು. ಎಲ್ಲೆಲ್ಲಿ ಮರಮ್ ತೆಗೆಯಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಚಿಕ್ಕಜಂತಕಲ್, ಢಣಾಪುರ ಗ್ರಾಪಂ, ಕನಕಗರಿ, ಕಾರಟಗಿ ವ್ಯಾಪ್ತಿಯ ಗ್ರಾಮಗಳಲ್ಲಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಸಹಾಯಕ ಅಧಿಕಾರಿಗಳಿಗೆ ತಿಳಿಸಿದರು.
ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಹಾಯಕ ಅಧಿಕಾರಿಗಳಾದ ಚಿದಾನಂದ, ನವೀನ್ ಕುಮಾರ್, ಈ.ನಾಗರಾಜ್ ಇತರರಿದ್ದರು.