ಕೊಪ್ಪಳ ತಾಲೂಕಿನ ಬಗನಾಳ ಗ್ರಾಮದಲ್ಲಿ ಕಾರ್ಖಾನೆ ವಿಸ್ತರಣೆ ವಿರೋಧಿಸಿ ಜಂಟಿ ಕ್ರಿಯಾ ಸಮಿತಿ ಸಂಚಾಲಕರು ಗುರುವಾರ ಜಾಗೃತಿ ಸಭೆ ನಡೆಸಿದರು. ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೊಂಡಬಾಳ, ಮಂಜುನಾಥ ಗೊಂಡಬಾಳ, ಗ್ಯಾನೇಶ ಹ್ಯಾಟಿ, ಸರೋಜಾ ಬಾಕಳೆ, ಬಸವರಾಜ ಪೂಜಾರ ಕಾಸನಕಂಡಿ ಇದ್ದರು.  
ಕೊಪ್ಪಳ

ಕಾರ್ಖಾನೆ ತೊಲಗಿಸಿ ಜೀವ ಉಳಿಸಿ

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರರ ಆಗ್ರಹ
  • ಕಾರ್ಖಾನೆ ಬಾಧಿತ ಗ್ರಾಮಗಳಲ್ಲಿ ಬೈಕ್​ ರ್ಯಾಲಿ
ಕೊಪ್ಪಳ : ಬಿಎಸ್​ಪಿಎಲ್​ ಸೇರಿ ಇತರ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಜಂಟಿ ಕ್ರಿಯಾ ಸಮಿತಿ ಸಂಚಾಲಕರು ಗುರುವಾರ ಕಾರ್ಖಾನೆ ಬಾಧಿತ ಗ್ರಾಮಗಲ್ಲಿ ಬೈಕ್​ ರ್ಯಾಲಿ ನಡೆಸಿ ಜಾಗೃತಿ ಮೂಡಿಸಿದರು.
133ನೇ ದಿನದ ಹೋರಾಟ ಅಂಗವಾಗಿ ಕಿಡದಾಳ, ಬಸಾಪುರ, ಗಿಣಿಗೇರಾ, ಕನಕಾಪುರ, ಕಾಸನಕಂಡಿ, ಹಿರೇಬಗನಾಳ, ಚಿಕ್ಕಬಗನಾಳ, ಲಾಚನಕೇರಿ, ಕುಣಿಕೇರಿ, ಕುಣಿಕೇರಿ ತಾಂಡಾ, ಹಾಲವರ್ತಿ ಗ್ರಾಮಗಳಲ್ಲಿ ಅರಿವು ಮೂಡಿಸಲಾಯಿತು. ಮಾಲಿನ್ಯಕಾರಕ ಕಾರ್ಖಾನೆಗಳನ್ನು ಸ್ಥಳಾಂತರ ಮಾಡಿ, ಬಲ್ಡೋಟ ಅತಿಕ್ರಮಣದಿಂದ ಬಸಾಪುರ ಕೆರೆ ಮುಕ್ತಗೊಳಿಸಿ, ತುಂಗಭದ್ರಾ ವಿಷಗೊಳಿಸಿದ ಕೈಗಾರಿಕೆಗಳನ್ನು ಬಂದ್​ ಮಾಡಿ ಎಂದು ಆಗ್ರಹಿಸಿದರು. ಕಾಸನಕಂಡಿಯಲ್ಲಿ ಬಹಿರಂಗ ಸಭೆ ನಡೆಸಲಾಯಿತು.
ಡಾ.ಮಂಜುನಾಥ ಸಜ್ಜನ ಮಾತನಾಡಿ, ಇಲ್ಲಿನ ಕಾರ್ಖಾನೆಗಳು ಪರಿಸರ ಸ್ನೇಹಿಯಾಗಿಲ್ಲ. ಕಪು$್ಪ ಧೂಳಿನ ಅಪಾಯಕ್ಕಿಂತ, ಬಿಳಿ ಬಣ್ಣದ ಹೊಗೆ ಅತ್ಯಂತ ಅಪಾಯಕಾರಿ. ಅಂಥ ಹೊಗೆ ಸೇವಿಸಿದರೆ ಶ್ವಾಸಕೋಶ ತೊಂದರೆ, ಕ್ಯಾನ್ಸರ್​, ನರರೋಗ, ಕುರುಡುತನ ಬರಲಿದೆ ಎಂದರು.
ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹಿರೇ ಬಗನಾಳದಲ್ಲಿ ಮಾತನಾಡಿ, ಸ್ಪಾಂಜ್​ ಐರನ್​ ಘಟಕಗಳು ತುಂಗಭದ್ರಾ ಜಲಾಶಯ ಮಾಲಿನ್ಯ ಮಾಡುತ್ತಿವೆ. ಇದನ್ನು ಕಂಡು ಕಾಣದಂತೆ ಪರಿಸರ ಅಧಿಕಾರಿಗಳು ವರ್ತಿಸುವ ನಡೆ ಸರಿಯಲ್ಲ. ಇದೇ ನೀರು ಲಕ್ಷಗಟ್ಟಲೆ ಜನ ಕುಡಿದು ರೋಗಗ್ರಸ್ಥರಾದರೆ ಯಾರು ಹೊಣೆ ? ಕೃಷಿ ಬೆಳೆ ಹಾನಿ, ಜಾನುವಾರು ಸಾವಿಗೆ ಅವಕಾಶ ನೀಡಬಾರದು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇದ್ದಕ್ಕೆ ಅವಕಾಶ ನೀಡಬಾರದು.
ಸಂಚಾಲಕರಾದ ಮಲ್ಲಿಕಾರ್ಜುನ ಗೊಂಡಬಾಳ, ಮಂಜುನಾಥ ಗೊಂಡಬಾಳ, ಗ್ಯಾನೇಶ ಹ್ಯಾಟಿ, ಸರೋಜಾ ಬಾಕಳೆ, ಬಸವರಾಜ ಪೂಜಾರ ಕಾಸನಕಂಡಿ, ಶಿವಪ್ಪ ದೇವರಮನಿ ಹಿರೇಬಗನಾಳ, ಶರಣು ಗಡ್ಡಿ, ಗವಿಸಿದ್ದಪ್ಪ ಪುಟಗಿ ಹಿರೇಬಗನಾಳ, ನಟರಾಜ ಸವಡಿ, ಮಹಾಂತೇಶ ಕೊತಬಾಳ, ಎಸ್​.ಬಿ. ರಾಜೂರು ಮಾತನಾಡಿದರು.
ರ್ಯಾಲಿಯಲ್ಲಿ ಪರಿಸರ ಇಂಜಿನಿಯರ್​ ವಿನಯ್​ ಸಜ್ಜನ್​, ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ, ಬಸಾಪುರ, ಮಹೇಶ ವದ್ನಾಳ ಹಿರೇಬಗನಾಳ, ನಿವೃತ್ತ ನ್ಯಾಯಾಂಗ ಅಧಿಕಾರಿ ಜಿ.ಬಿ. ಪಾಟೀಲ್​, ಮಂಜುನಾಥ ಕೆಂಚನಗೌಡ್ರ, ಶರಣು ಪಾಟೀಲ್​, ವಿದ್ಯಾ ನಾಲ್ವಾಡ, ಶರಣು ಶೆಟ್ಟರ್​, ನಾಗರಾಜ ಕುಷ್ಟಗಿ ಲಾಚನಕೇರಿ ಇತರರಿದ್ದರು.