ಅಳವಂಡಿ ಸಮೀಪದ ಕಾತರಕಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಶಿವಶಾಂತವೀರ ಸ್ವಾಮೀಜಿ ಮಾತನಾಡಿದರು. ಪ್ರಮುಖರಾದ ಚಂದ್ರಾಮಪ್ಪ ಕಣಕಾಲ, ಕೊಟ್ರಯ್ಯಸ್ವಾಮಿ ಹಿರೇಮಠ, ಶ್ರೀನಿವಾಸ ಜೋಶಿ, ಬಸವರಾಜ ಹಿರೇಮಠ, ಜಿಪಂ ಮಾಜಿ ಅಧ್ಯಕ್ಷ ಎಚ್‌ಎಲ್ ಹಿರೇಗೌಡ್ರು, ರಾಬಕೊವಿ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರು, ಕೊಟ್ರಯ್ಯ ಅಬ್ಬಿಗೇರಿ ಮಠ, ನೀಲಕಂಠಪ್ಪ ಇತರರಿದ್ದರು.
ಅಳವಂಡಿ: ನಿತ್ಯವೂ ದೇವರ ಸ್ಮರಣೆ ಮಾಡುತ್ತಾ ಬದುಕನ್ನು ನಿತ್ಯೋತ್ಸವ ಮಾಡಿಕೊಳ್ಳಬೇಕು ಎಂದು
ಶಿವಶಾಂತವೀರ ಸ್ವಾಮೀಜಿ ಹೇಳಿದರು.
ಸಮೀಪದ ಕಾತರಕಿ ಗ್ರಾಮದ ಶ್ರೀ ಮಾರುತೇಶ್ವರ ಜಾತ್ರೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.
ಕಟ್ಟಿಗೆಯಿಂದ ತಯಾರು ಮಾಡಿದಂತಹ ರಥ ಅದಕ್ಕೆ ಕಲ್ಲಿನಿಂದ ಮಾಡಿದ ಗಾಲಿ, ನೂಲಿನಿಂದ ಮಾಡಿದ ಹಗ್ಗ ಕಟ್ಟಿ ಭಕ್ತಿ ಭಾವದಿಂದ ರಥದೊಳಗೆ ಒಂದು ಪೀಠವನ್ನು ಮಾಡಿ ಅದರ ಮೇಲೆ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥವನ್ನು ಎಳೆದು ಸಂಭ್ರಮಿಸುತ್ತಿರಿ. ಮತ್ತೆ ಈ ಸಂಭ್ರಮ ಈ ಉತ್ಸಾಹ, ಈ ಉತ್ಸವ ಮರಳಿ ಬರಬೇಕಾದರೆ ಒಂದು ವರ್ಷ ಕಾಯಬೇಕು. ಕಾರಣ ವರ್ಷ ಕಾಯದೆ ನಿತ್ಯವೂ ದೇವರ ಸ್ಮರಣೆ ಮಾಡುತ್ತಾ ಬದುಕನ್ನು ನಿತ್ಯೋತ್ಸವ ಮಾಡಿಕೊಳ್ಳಬೇಕು ಎಂದರು.
ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ಮನುಷ್ಯ ಇರುವಷ್ಟು ದಿವಸ ಸಂತೋಷ ಹಾಗೂ ತಿಳಿವಳಿಕೆಯಿಂದ ಬದುಕಬೇಕು. ಈ ನಿಟ್ಟಿನಲ್ಲಿ ಭಕ್ತರು ಇಂತಹ ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸಿ ಪುನಿತರಾಗಬೇಕು ಎಂದರು.
ಪ್ರಮುಖರಾದ ಕೃಷ್ಣಪ್ಪ ಬೆಟಗೇರಿ, ಶಂಕರಗೌಡ ಹಿರೇಗೌಡರು, ಮಲ್ಲಣ್ಣ ಗುಗ್ರಿ, ದೇವಪ್ಪ ಬೈರಣ್ಣನವರು, ವಿಶ್ವನಾಥ ಕಂಪ್ಲಿ, ನಾಗರಾಜ ಹುರಕಡ್ಲಿ, ಯರಿಯಪ್ಪ ಗೌಡ ಹಿರೇಗೌಡ್ರು, ಮಲ್ಲಯ್ಯ ಸಾಲಿಮಠ, ಸುರೇಶ ಕೋರಗಲ, ಸುರೇಶ ತಳವಾರ, ಮೈಲಪ್ಪ ದೇವರಮನಿ, ಮಂಜುನಾಥ ಮೂಕಪ್ಪನವರ ಇತರರು ಇದ್ದರು.