ಸಿದ್ದಾಪುರ ಗ್ರಾಪಂ ಕಚೇರಿಯಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಬಸವರಾಜ, ಜನಗಂಡೆಪ್ಪ ಪೂಜಾರ್, ವೆಂಕಟೇಶ್, ಪಂಪನಗೌಡ ಸುಜುಕಿ, ಬಸವರಾಜ ಹಳೇಮನಿ ಇದ್ದರು. 
ಕೊಪ್ಪಳ

ಸಂಕಷ್ಟಗಳ ನಡುವೆ ಧಾರ್ಮಿಕ ಸೇವೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಂಕಷ್ಟ

ಸಂಕಷ್ಟಗಳ ನಡುವೆ ಧಾರ್ಮಿಕ ಸೇವೆ

ಸಿದ್ದಾಪುರ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಹಾಗೂ ಆದರ್ಶ ಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಮ-ವೇಮ ರೆಡ್ಡಿ ಸಂಘದ ಸಿದ್ದಾಪುರ ಘಟಕದ ಅಧ್ಯಕ್ಷ ರವಿಚಂದ್ರ ಹೊಸಮನಿ ಹೇಳಿದರು.
ಗ್ರಾಪಂ ಕಚೇರಿ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ಅನೇಕ ಸಂಕಷ್ಟಗಳನ್ನು ಅನುಭವಿಸಿದರೂ ಧಾರ್ಮಿಕ ಕಾರ್ಯ ಕೈಬಿಡಲಿಲ್ಲ.
ಸಮಾಜದ ಉದ್ದರಕ್ಕಾಗಿ ಶ್ರಮಿಸಿದ ಮಹಾನ್ ಸಾಧ್ವಿ. ಭಕ್ತಿ, ತತ್ವ ಮತ್ತು ಪೂಜೆಯ ವಿಚಾರದಲ್ಲಿ ಸರ್ವರಿಗೂ ಮಾದರಿಯಾಗಿದ್ದಾರೆ. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮಲ್ಲಮ್ಮನ ಜೀವನ ಚರಿತ್ರೆ ತಿಳಿಸಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಿವಗಂಗಾ ಪಂಪಾಪತಿ, ಉಪಾಧ್ಯಕ್ಷ ಚನ್ನಬಸವನಗೌಡ, ಪಿಡಿಒ ಜ್ಯೋತಿ ರೆಡ್ಡಿ, ಪ್ರಮುಖರಾದ ಬಸವರಾಜ, ಜನಗಂಡೆಪ್ಪ ಪೂಜಾರ್, ವೆಂಕಟೇಶ್, ಪಂಪನಗೌಡ ಸುಜುಕಿ, ಬಸವರಾಜ ಹಳೇಮನಿ, ಮಲ್ಲನಗೌಡ, ಸೂರ್ಯಕಾಂತ, ಮಲ್ಲಿಕಾರ್ಜುನ, ಪಂಪನಗೌಡ ಇತರರಿದ್ದರು.