ಗಂಗಾವತಿ ಶ್ರೀಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ ಜ್ಞಾನ ಸತ್ರ ನಿಮಿತ್ತ ಹಮ್ಮಿಕೊಂಡಿದ್ದ ದೇವಾಲಯ ಸಮಿತಿ ಸಭೆಯಲ್ಲಿ ಸಮಿತಿ ಅಧ್ಯಕ್ಷ ಮುರಳೀಧರ ಗಂಗನಾಳ್ ಸೋಮವಾರ ಮಾತನಾಡಿದರು. ಪಂ.ಪ್ರದೀಪ ಆಚಾರ್, ಪ್ರಮುಖರಾದ ಶೇಷಗಿರಿ ಕುಲ್ಕರ್ಣಿ, ಅನಿಲ್‌ಭಟ್, ಪವನ ಪ್ರಸನ್ನಕುಮಾರ ಭಟ್ ಇತರರಿದ್ದರು.
- ಮುರಳೀಧರ ಗಂಗನಾಳ್ ಮಾಹಿತಿ
- ಗಂಗಾವತಿ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯ
ಗಂಗಾವತಿ: ಜೇಷ್ಠ ಅಧಿಕ ಮಾಸದ ನಿಮಿತ್ತ ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ 33 ದಿನಗಳ ಜ್ಞಾಸತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಾಲಯ ಅಧ್ಯಕ್ಷ ಮುರಳೀಧರ ಗಂಗನಾಳ್ ಹೇಳಿದರು.
ನಗರದ ಶ್ರೀ ಯೋಗೀಶ್ವರ ಯಾಜ್ಞವಲ್ಕೃ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಜ್ಞಾನ ಸತ್ರ ಕಾರ್ಯಕ್ರಮಕ್ಕೆ ಮೇ 17ರಂದು ಚಾಲನೆ ನೀಡಲಾಗಿದ್ದು ಜೂ.15ರವರೆಗೆ ಜರುಗಲಿದೆ. ಪ್ರತಿ ದಿನ ಸಂಜೆ ವಿದ್ವಾಂಸರಿಂದ ವಿಶೇಷ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೂ.13ರಂದು ಕಣ್ವ ಮಠಾಧೀಶ ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಸ್ವಾಮೀಜಿ ಪುರಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಜೂ.14ಕ್ಕೆ ಪುರುಷೋತ್ತಮ ಯಾಗ, ವಿವಿಧ ಭಕ್ತರ ಮನೆಯಲ್ಲಿ ಶ್ರೀಗಳ ಪಾದಪೂಜೆ, ದೇವಾಲಯದಲ್ಲಿ ಸಂಸ್ಥಾನ ಪೂಜೆ, ಭಕ್ತರಿಗೆ ತಪ್ತ ಮುದ್ರಾಧಾರಣೆ, ಹೋಮ-ಹವನ, ಪೂರ್ಣಾಹುತಿ, ಭಜನೆ ಇತರ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಅಧಿಕ ಮಾಸದ ವಿಶೇಷತೆ, ಭಾಗವತ ಪುರಾಣ ಶ್ರವಣ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಕುರಿತು ಪಂ.ಪ್ರದೀಪ ಆಚಾರ್ ಮಾಹಿತಿ ನೀಡಿದರು. ನಂತರ ಬೆಂಗಳೂರಿನ ವಿದ್ವಾನ್ ಬಿ.ನಾರಾಯಣಾಚಾರ್‌ರಿಂದ ವಿಷ್ಣು ಸಹಸ್ರನಾಮ ಚಿಂತನೆ ಕುರಿತು ವಿಶೇಷ ಪ್ರವಚನ ನಡೆಯಿತು. ಪ್ರಮುಖರಾದ ಶೇಷಗಿರಿ ಕುಲ್ಕರ್ಣಿ, ಅನಿಲ್‌ಭಟ್, ಪವನ ಪ್ರಸನ್ನಕುಮಾರ ಭಟ್, ಆನಂದ ದೇಸಾಯಿ, ಚಿರ್ಚನಗುಡ್ಡ ಗುರುರಾಜ್ ಇತರರಿದ್ದರು.