ಹನುಮಸಾಗರ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಧ್ಯಾನ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಶರಣಪ್ಪ ಗುಳೇದ ಮಾತನಾಡಿದರು. ಮುಖ್ಯಶಿಕ್ಷಕ ಎಚ್.ಎಚ್. ಇಳಕಲ್ಲ, ಕೆಪಿಎಸ್ ಉಪಾಧ್ಯಕ್ಷ ಬಸವರಾಜ ದ್ಯಾವಣ್ಣನವರ, ಶಿಕ್ಷಕರಾದ ಕಿಶನ್‌ರಾವ್ ಕುಲಕರ್ಣಿ, ಅಮರೇಶ ತಮ್ಮಣ್ಣವರ, ಶಂಕ್ರಪ್ಪ ತಳವಾರ, ಭಾರತಿ ಕುರುಮನಾಳ ಇತರರಿದ್ದರು. 
ಕೊಪ್ಪಳ

ಪ್ರಾಣಾಯಾಮದಿಂದ ಮಾನಸಿಕ ಒತ್ತಡ ನಿವಾರಣೆ

ಪ್ರಮುಖ ಮುಖ್ಯಾಂಶಗಳು

  • ವಿಶ್ವಧ್ಯಾನ
  • ದಿನಾಚರಣೆ
  • ಧ್ಯಾನ ಕಾರ್ಯಕ್ರಮ
ಹನುಮಸಾಗರ: ಧ್ಯಾನ ಮಾಡುವುದರಿಂದ ಆತ್ಮವಿಶ್ವಾಸ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಜ್ಞಾನ ವೃದ್ಧಿಯಾಗುತ್ತದೆ ಎಂದು ಧ್ಯಾನ ಪ್ರಚಾರಕ ಏಕನಾಥ ಮೆದಿಕೇರಿ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ವಿಶ್ವಧ್ಯಾನ ದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಧ್ಯಾನ ಕಾರ್ಯಕ್ರಮದಲ್ಲಿ ಧ್ಯಾನದ ವಿಧಾನ ಪ್ರಾಯೋಗಿಕವಾಗಿ ವಿವರಿಸಿ ಮಾತನಾಡಿದರು.
ಸುಖಾಸನದಲ್ಲಿ ಕುಳಿತು ಸಹಜವಾಗಿ ನಡೆಯುವ ಉಸಿರಾಟವನ್ನು ಗಮನಿಸುವ ಮೂಲಕ ಯಾವುದೇ ಮಂತ್ರಜಪ, ನಾಮಸ್ಮರಣೆ ಅಥವಾ ದೈವಿಕ ಕಲ್ಪನೆಗಳಿಲ್ಲದೆ ಧ್ಯಾನ ಸ್ಥಿತಿಗೆ ತಲುಪಬಹುದು. ಧ್ಯಾನದಿಂದ ದೇಹದಲ್ಲಿ ವಿಶ್ವಮಯ ಪ್ರಾಣಶಕ್ತಿ ಪ್ರವೇಶಿಸಿ ನಾಡಿ ಮಂಡಲ ಶುದ್ಧಿಯಾಗಿ ಸಂಪೂರ್ಣ ಆರೋಗ್ಯ ದೊರೆಯುವುದರ ಜತೆಗೆ, ಏಕಾಗ್ರತೆ, ನೆನಪಿನ ಶಕ್ತಿ, ಆತ್ಮವಿಶ್ವಾಸ, ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಜ್ಞಾನ ವೃದ್ಧಿಯಾಗುತ್ತದೆ.
ನಿಯಮಿತ ಧ್ಯಾನದಿಂದ ಸುಪ್ತ ಚೇತನಗಳು ಜಾಗೃತಿಯಾಗಿ ಬುದ್ಧಿ ಸೂಕ್ಷ್ಮತೆ ಹೆಚ್ಚಾಗುತ್ತದೆ. ಎಲ್ಲ ವಯೋಮಾನದವರು ಯಾವ ಸಮಯ, ಸ್ಥಳದಲ್ಲಿಯೂ ಧ್ಯಾನ ಮಾಡಬಹುದು. ಧ್ಯಾನದಿಂದ ಮಾನಸಿಕ ಒತ್ತಡ ನಿವಾರಣೆ, ಜೀವನದ ಗುರಿಯ ಸ್ಪಷ್ಟತೆ ಹಾಗೂ ಮಾನವೀಯ ಸಂಬಂಧಗಳ ಸುಧಾರಣೆ ಸಾಧ್ಯವಾಗುತ್ತದೆ ಎಂದರು.
ಮುಖ್ಯ ಶಿಕ್ಷಕ ಶರಣಪ್ಪ ಗುಳೇದ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಧ್ಯಾನ ಅತ್ಯಂತ ಅವಶ್ಯಕವಾಗಿದ್ದು ಏಕಾಗ್ರತೆ ಹಾಗೂ ಶಿಸ್ತನ್ನು ಬೆಳೆಸಲು ಧ್ಯಾನ ಸಹಕಾರಿಯಾಗಿದೆ. ಇಂತಹ ಕಾರ್ಯಕ್ರಮಗಳು ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಶಿಕ್ಷಕರಾದ ಈರಣ್ಣ ಪರಸಾಪುರ, ಸವಿತಾ ಕಂದಗಲ, ವಿಜಯಕುಮಾರ ಚೆಲ್ಲಾಳ, ಬೀರಪ್ಪ ಕಡ್ಲಿಮಟ್ಟಿ, ಷಣ್ಮುಖಪ್ಪ ಕರಡಿ, ಯಲ್ಲಮ್ಮ, ಶ್ರೀಕಾಂತ್‌ಗೌಡ, ರಾಮಚಂದ್ರ ಬಡಿಗೇರ, ಶರಣಪ್ಪ ಬೋದೂರ, ಚಂದಪ್ಪ ಕುಂಬಾರ ಇತರರಿದ್ದರು.