ನರೇಗಾ ಯೋಜನೆಯಡಿ ಕೈಗೊಂಡ ಕೊಪ್ಪಳದ ಗಿಣಿಗೇರಾ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಭೇಟಿ ನೀಡಿ ವಿಮೆ ನೋಂದಣಿ ಕುರಿತು ಮಾಹಿತಿ ನೀಡಿದರು. ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ ಇದ್ದರು. 
ಕೊಪ್ಪಳ

ವಿಮಾ ಯೋಜನೆಗಳಿಗೆ ನೋಂದಣಿ ಕಡ್ಡಾಯ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಕೂಲಿ
  • ಹಣದಿಂದ
  • ಮಕ್ಕಳ
ಕೊಪ್ಪಳ: ಪ್ರತಿಯೊಬ್ಬ ಕೂಲಿಕಾರರು ಕೂಲಿ ಕೆಲಸದ ಜತೆಗೆ ಸರ್ಕಾರದ ಭದ್ರತಾ ವಿಮಾ ಯೋಜನೆಗಳಿಗೆ ಕಡ್ಡಾಯವಾಗಿ ನೋಂದಣಿ ವಾಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ ಹೇಳಿದರು.
ತಾಲೂಕಿನ ಗಿಣಿಗೇರಾ ಕೆರೆ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ವಾತನಾಡಿದರು. ಪ್ರತಿ ಮನುಷ್ಯನಿಗೆ ದಿನಕ್ಕೆ 370 ಕೂಲಿ ನಿಗದಿಪಡಿಸಲಾಗಿದ್ದು, 6 ಅಡಿ ಉದ್ದ, 6 ಅಡಿ ಅಗಲ ಹಾಗೂ 1 ಅಡಿ ಆಳದಲ್ಲಿ ಮಣ್ಣನ್ನು ಅಗೆದು ನಿಗದಿತ ಪ್ರವಾಣದ ಕೆಲಸ ಪೂರ್ಣಗೊಳಿಸಿದರೆ ಸಂಪೂರ್ಣ ಕೂಲಿ ಪಡೆಯಬಹುದು.
ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಕೂಲಿಕಾರರು ಆರೋಗ್ಯದ ಕಡೆಗೂ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
18 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರು ಜಾಬ್‌ಕಾರ್ಡ್ ಬಳಸಿ ನಮೂನೆ 6 ಸಲ್ಲಿಸುವ ಮೂಲಕ ಕೆಲಸ ಪಡೆಯಬೇಕು. ಏಪ್ರಿಲ್‌ನಿಂದ ಜೂನ್‌ವರೆಗೆ 90 ದಿನಗಳ ಉದ್ಯೋಗ ಪಡೆಯಬಹುದು. ಕೂಲಿ ಹಣದಿಂದ ಮಕ್ಕಳ ಶಿಕ್ಷಣ ವೆಚ್ಚ, ಸ್ಪರ್ಧಾತ್ಮಕ ಪರೀಕ್ಷಾ ಶುಲ್ಕ ಹಾಗೂ ಕುಟುಂಬ ನಿರ್ವಹಣೆಗೆ ಸಹಾಯವಾಗುತ್ತದೆ. ಎಲ್ಲ ಕೂಲಿಕಾರರು ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ವಿಮೆ ಯೋಜನೆಗಳಿಗೆ ನೋಂದಣಿ ವಾಡಿಕೊಳ್ಳುವುದರಿಂದ ಆರ್ಥಿಕ ಭದ್ರತೆ ದೊರೆಯುತ್ತದೆ ಎಂದು ತಿಳಿಸಿದರು.
ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಹಾಯಕಿ ವೀಣಾ ಅಂಗಡಿ, ಗ್ರಾಪಂ ಡಿಇಒ ರಾಜಾಭಕ್ಷಿ ಪಾಯಪ್ಪನವರ, ಹನಮೇಶ ಹೊಸೂರು, ರುದ್ರೇಶ ಬಳಿಗಾರ, ಶಿವಕುವಾರ, ವಾರುತಿ, ಶ್ರೀದೇವಿ ಧರ್ಮಪುರ, ಬಸಮ್ಮ ಬಗನಾಳ, ಶಾರದಾ ಗೋಡೆಕರ್‌ಇತರರಿದ್ದರು.