ಕೊಪ್ಪಳದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಉಷಾದೇವಿ ಹಿರೇಮಠ ಮಾಡಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಸೋಮರೆಡ್ಡಿ ಅಳವಂಡಿ, ಉಪಸಭಾಪತಿ ಡಾ. ಮಂಜುನಾಥ್ ಬಿ. ಸಜ್ಜನ್, ಎಸ್.ಎಂ. ಬಸವರಾಜ, ಯು.ಎಸ್ ಸೊಪ್ಪಿಮಠ ಇದ್ದರು.
- ಉಷಾದೇವಿ ಹಿರೇಮಠ ಅಭಿಪ್ರಾಯ
- ವಿಶ್ವ ರೆಡ್ ಕ್ರಾಸ್ ದಿನಾಚರಣೆ
ಕೊಪ್ಪಳ : ಯಾವುದೇ ಪ್ರದೇಶದಲ್ಲಿ ಭೂಕಂಪ, ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತು ಸಂಭವಿಸಿದಾಗ ಮೊದಲಿಗೆ ಜನರ ನೆರವಿಗೆ ಧಾವಿಸುವ ಸಂಸ್ಥೆ ರೆಡ್ ಕ್ರಾಸ್ ಎಂದು ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಉಷಾದೇವಿ ಹಿರೇಮಠ ಹೇಳಿದರು.
ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಡಿದರು.
ಯಾವುದೇ ಯುದ್ಧದ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಚಿಹ್ನೆಯೊಂದಿಗೆ ಸೇವೆ ಸಲ್ಲಿಸುವ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ದಾಳಿ ನಡೆಯದಿರುವುದು ಸಂಸ್ಥೆಯ ವಿಶ್ವಾಸಾರ್ಹತೆಗೆ ಸಾಕ್ಷಿಯಾಗಿದೆ. ವಿಪತ್ತುಗಳ ಸಂದರ್ಭದಲ್ಲಿ ಜನರಿಗೆ ಆಹಾರ, ಚಿಕಿತ್ಸೆ ಹಾಗೂ ರಕ್ಷಣೆಯಂತಹ ಅಗತ್ಯ ನೆರವು ನೀಡುವ ಮೂಲಕ ರೆಡ್ ಕ್ರಾಸ್ ಸಂಸ್ಥೆ ಮಾನವೀಯ ಸೇವೆಯ ಪ್ರತಿಕವಾಗಿದೆ. ಹಲವಾರು ವಿಪತ್ತುಗಳು ಸಂಭವಿಸಿದಾಗ ನಮ್ಮ ಕೊಪ್ಪಳ ರೆಡ್ ಕ್ರಾಸ್ ಸಂಸ್ಥೆಯಿಂದಲೂ ಸಹ ಸಾಕಷ್ಟು ಸೇವೆಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಸಭಾಪತಿ ಸೋಮರೆಡ್ಡಿ ಅಳವಂಡಿ ಮಾತನಾಡಿ, ಯುವಕರು ತಮ್ಮ ಸುತ್ತಮುತ್ತ ನಡೆಯುವ ಸಂಕಷ್ಟಗಳಿಗೆ ಸ್ಪಂದಿಸಿ ಮಾನವೀಯ ಸೇವೆ ಸಲ್ಲಿಸಬೇಕು. ರೆಡ್ ಕ್ರಾಸ್ ಸಂಸ್ಥೆಗೆ ಜಾತಿ, ಧರ್ಮ, ಮತಭೇದಗಳಿಲ್ಲದೆ ನಿಸ್ವಾರ್ಥ ಸೇವೆಯೇ ಮುಖ್ಯ ಉದ್ದೇಶವಾಗಿದೆ ಎಂದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಉಪಸಭಾಪತಿ ಡಾ. ಮಂಜುನಾಥ್ ಬಿ. ಸಜ್ಜನ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಸಮಾಜದಲ್ಲಿ ಸ್ವಯಂಸೇವಾ ಮನೋಭಾವ ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿಮಾರ್ಣಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎಸ್.ಎಂ. ಬಸವರಾಜ, ಉಪನ್ಯಾಸಕರಾದ ಯು.ಎಸ್ ಸೊಪ್ಪಿಮಠ, ಸೋಮಶೇಖರ್, ರಾಜು ಯು., ಪ್ರಗತಿ, ಸೌಮ್ಯ ನಾಲ್ವಾಡ, ವಿದ್ಯಾರ್ಥಿಗಳಾದ ಬಸವರಾಜ್ ಘರ್ಜಿನಾಳ, ಸಂಕಲ್ಪ ಇತರರಿದ್ದರು.