- ವಿಡಿಯೋ ವೈರಲ್ ಮಾಡಿ ಬೆದರಿಕೆ
- ಏಳು ಆರೋಪಿಗಳ ಬಂಧನ
ಕೊಪ್ಪಳ : ಜಿಲ್ಲೆಯ ಗ್ರಾಮವೊಂದರ ಪ್ರೌಢ ಶಾಲೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ವೈರಲ್ ಮಾಡಿದ ಟನೆ ವರ್ಷದ ಬಳಿಕ ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದವ ಹಾಗೂ ವಿಡಿಯೋ ಮಾಡಿಕೊಂಡು ವೈರಲ್ ಮಾಡಿದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಹಾಗೂ ಅದೇ ಗ್ರಾಮದ ಹರ್ಷಾ ಹಾಗೂ ಕಿರಣ್ ಎಂಬುವವರು ವರ್ಷದ ಹಿಂದೆ ಪರಿಚಿತರಾಗಿದ್ದಾರೆ. 2025ರ ಅಕ್ಟೋಬರ್ 10ಂದು ಬಾಲಕಿಯನ್ನು ಕರೆದೊಯ್ದಿದ್ದ ಹರ್ಷಾ ಮತ್ತು ಬರುವಂತೆ ಮಾಡಿ ಅತ್ಯಾಚಾರ ಎಸಗಿದ್ದ. ಅದನ್ನು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಇದೇ ವಿಡಿಯೋ ಇಟ್ಟುಕೊಂಡು ಕಿರಣ್ ಸಹ ಬಾಲಕಿಗೆ ಬೆದರಿಕೆ ಹಾಕಿದ್ದಾನೆ. ವಿಡಿಯೋ ಕಾಲ್ ಮಾಡಿ ಅಶ್ಲೀವಾಗುವಂತೆ ಒತ್ತಾಯಿಸಿ ವಿಡಿಯೋ ಮಾಡಿಟ್ಟುಕೊಂಡಿದ್ದ. ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾನೆಂದು ಬಾಲಕಿ ತಂದೆ ಆಗಸ್ಟ್ 8ರಂದು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮುಖ್ಯ ಆರೋಪಿಗಳಿಬ್ಬರು ಹಾಗೂ ವಿಡಿಯೋ ವೈರಲ್ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಇತರ ಐವರನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಾಲಕಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆ.8ರಂದು ಪ್ರಕರಣ ದಾಖಲಾಗಿದೆ. ವರ್ಷದ ಹಿಂದೆ ಟನೆ ನಡೆದಿದೆ. ಇಬ್ಬರು ಮುಖ್ಯ ಆರೋಪಿಗಳ ವಿರುದ್ಧವಷ್ಟೇ ದೂರು ನೀಡಿದ್ದಾರೆ. ತನಿಖೆಯಲ್ಲಿ ಇನ್ನು ಐವರು ವಿಡಿಯೋ ವೈರಲ್ ಮಾಡಿದ್ದು ತಿಳಿದಿದ್ದು ಅವರನ್ನೂ ಬಂಧಿಸಲಾಗಿದೆ.
— ಡಾ.ರಾಮ್ ಎಲ್.ಅರಸಿದ್ದಿ. ಕೊಪ್ಪಳ ಎಸ್ಪಿ.