ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದಲ್ಲಿ ಶನಿವಾರ ರಂಜಾನ್ ಅಂಗವಾಗಿ ಶಿಕ್ಷಕ ಅಲ್ತಾಪ್ಸಾಬ್ ಅವರನ್ನು ಸನ್ಮಾನಿಸಲಾಯಿತು. ರಂಜಾನ್ಸಾಬ್ ಅಳ್ಳಳ್ಳಿ, ರಾಜಾಸಾಬ್ ಬಾವಿಕಟ್ಟಿ ಇದ್ದರು.
ಕೊಪ್ಪಳ: ಕುಷ್ಟಗಿ ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ರಂಜಾನ್ ಹಬ್ಬ ಆಚರಿಸಲಾಯಿತು.
ಹಿರೇಮನ್ನಾಪುರ ಗ್ರಾಮದ ಗುಡುದುರ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂರು ಸಾಂಪ್ರದಾಯಿಕ ಉಡುಪು ಧರಿಸಿ, ಶ್ರದ್ಧಾಭಕ್ತಿಯಿಂದ ಅಲ್ಲಾಹನಿಗೆ ನಮಿಸಿದರು. ಪ್ರಾರ್ಥನೆ ಬಳಿಕ ಪರಸ್ಪರ ಆಲಿಂಗಿಸಿಕೊಂಡು ಶುಭ ಕೋರಿದರು.
ಹಿರಿಯರು, ಯುವಕರು, ಮಕ್ಕಳು ಸಂಭ್ರಮದಿಂದ ಪಾಲ್ಗೊಂಡು ಹಬ್ಬದ ಖಳೆ ಹೆಚ್ಚಿಸದರು. ಗಣ್ಯರಾದ ಹಸನ್ ಸಾಬ ಬಾವಿಕಟ್ಟಿ, ಅಲ್ತಾಫ್ ಸಾಬ್ , ರಂಜಾನ್ ಸಾಬ್ ಅಳ್ಳಳ್ಳಿ, ಇಮಾಮ್ ಸಾಬ್ ಗರಡಿಮನಿ, ರಾಜಸಾಬ ಬಾವಿಕಟ್ಟಿ ಇತರರಿದ್ದರು.