ಗಂಗಾವತಿ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣ ನಿಯಂತ್ರಣಕ್ಕಾಗಿ ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ವಾಹನಗಳಿಗೆ ರೇಡಿಯಂ ಸ್ಟೀಕರ್ ಹಚ್ಚುವ ಮೂಲಕ ಜಾಗೃತಿ ಅಭಿಯಾನ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್, ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪ ಗಾಳಿ, ಪದಾಧಿಕಾರಿಗಳಾದ ರಾಜಶೇಖರ ಹೇರೂರ್ ಇತರರಿದ್ದರು.
- ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಜಾಗೃತಿ ಅಭಿಯಾನ
- ರಿಕ್ಷಾಗಳಿಗೆ ರೇಡಿಯಂ ಸ್ಟಿಕರ್
ಗಂಗಾವತಿ: ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣ ನಿಯಂತ್ರಣಕ್ಕಾಗಿ ಲಯನ್ಸ್ ಕ್ಲಬ್ ತಾಲೂಕು ಘಟಕದಿಂದ ಜಾಗೃತಿ ಅಭಿಯಾನ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಪದಾಧಿಕಾರಿಗಳು ನಗರದ ಎಲ್ಲ ಪ್ರಮುಖ ವತ್ತ, ರೋಡ್ ಡಿವೈಡರ್, ವಾಹನಗಳಿಗೆ, ಚಕ್ಕಂಡಿ, ರಿಕ್ಷಾಗಳಿಗೆ ರೇಡಿಯಂ ಸ್ಟಿಕರ್ ಹಚ್ಚುವುದರ ಜತೆಗೆ ಅಪಘಾತ ನಿಯಂತ್ರಣಕ್ಕೆ ಪೂರಕ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿದರು.
ತಾಲೂಕಾಧ್ಯಕ್ಷ ಡಾ. ಶಿವಕುಮಾರ್ ಮಾಲಿ ಪಾಟೀಲ ಮಾತನಾಡಿ, ರಾತ್ರಿ ವೇಳೆ ಸಂಚರಿಸುವ ವಾಹನಗಳ ಅತಿ ಹೆಚ್ಚಿನ ಬೆಳಕಿನಿಂದ ಅಪಘಾತ ಹೆಚ್ಚುತ್ತಿದ್ದು, ಕೆಲವೊಮ್ಮೆ ವೃತ್ತಗಳು, ಡಿವೈಡರ್ ಮತ್ತು ವಾಹನಗಳೇ ಕಾಣಿಸಲ್ಲ. ಹೀಗಾಗಿ ರೇಡಿಯಂ ಸ್ಟೀಕರ್‌ಗಳನ್ನು ಹಚ್ಚುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಕಾರ್ಯದರ್ಶಿ ಜಂಬಣ್ಣ ಐಲಿ, ಖಜಾಂಚಿ ಶಿವಪ್ಪ ಗಾಳಿ, ಪದಾಧಿಕಾರಿಗಳಾದ ರಾಜಶೇಖರ ಹೇರೂರ್, ರಾಮನಾಥ ಭಂಡಾರಕರ್, ಯಲ್ಲಪ್ಪ ಆಗಲೂರ್, ಮಂಜುನಾಥ ಕೊಟಗಿ, ಕಾಸಿಂ ಇತರರಿದ್ದರು.