ಗಂಗಾವತಿ 3ನೇ ವಾರ್ಡ್ ಜಯನಗರದಲ್ಲಿ ನಗರಸಭೆ ನೈರ್ಮಲ್ಯೀಕರಣದ ವಿಭಾಗದಿಂದ ಹಮ್ಮಿಕೊಂಡ ಘನತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನದಲ್ಲಿ ಹಾಸ್ಯಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಮಾತನಾಡಿದರು. ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಪ್ರಮುಖರಾದ ರಾಘವೇಂದ್ರ ಮೇಗೂರು, ವಾದಿರಾಜಾಚಾರ್ ಕಲ್ಮಂಗಿ, ಸಹನಾ, ರೇಷ್ಮಾ ಹಿರೇಮಠ ಇತರರಿದ್ದರು.
- ಸಮುದಾಯ
- ಸಂಚಾಲಕ
- ಪ್ರಾತ್ಯಕ್ಷಿಕೆ
ಗಂಗಾವತಿ: ನಗರದ 3ನೇವಾರ್ಡ್ ಜಯನಗರ ಮತ್ತು ಸತ್ಯನಾರಾಯಣ ಪೇಟೆಯಲ್ಲಿ ನಗರಸಭೆ ನೈರ್ಮಲ್ಯೀಕರಣ ವಿಭಾಗದಿಂದ ಘನತ್ಯಾಜ್ಯ ವಿಲೇವಾರಿ ಜಾಗೃತಿ ಅಭಿಯಾನ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ವಾರ್ಡ್ ನಿವಾಸಿಗಳಿಗೆ ತ್ಯಾಜ್ಯ ವಿಂಗಡಣೆ ಕುರಿತು ನೈರ್ಮಲ್ಯೀಕರಣ ಸಿಬ್ಬಂದಿ ಮತ್ತು ಸಮುದಾಯ ಸಂಚಾಲಕರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಅಭಿಯಾನದಲ್ಲಿ ಪಾಲ್ಗೊಂಡಿದ್ದ ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಮಾತನಾಡಿ, ನಗರಸಭೆ ಪೌರ ಕಾರ್ಮಿಕರ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕಿದ್ದು, ತ್ಯಾಜ್ಯ ವಿಲೇವಾರಿ ವಿಚಾರದಲ್ಲಿ ಪೌರ ಕಾರ್ಮಿಕರೊಂದಿಗೆ ಸ್ಪಂದಿಸಬೇಕು.
ಮನೆಯತ್ತ ಬರುವ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಕಸ ಹಾಕಬೇಕಿದ್ದು, ಎಲ್ಲೆಂದರಲ್ಲಿ ಹಾಕುವಂತಿಲ್ಲ. ಹಸಿ, ಒಣ, ಸ್ಯಾನಿಟರಿ, ವಿಶೇಷ ತ್ಯಾಜ್ಯಗಳನ್ನು ವಿಂಗಡಿಸಿ ವಾಹನಕ್ಕೆ ಹಾಕಬೇಕು ಎಂದರು.
ನಯೋಪ್ರಾ ಮಾಜಿ ಅಧ್ಯಕ್ಷ, ಪತ್ರಕರ್ತ ಮಹಾಲಿಂಗಪ್ಪ ಬನ್ನಿಕೊಪ್ಪ ಮಾತನಾಡಿದರು. ಪ್ರಮುಖರಾದ ಮಂಜುನಾಥಸ್ವಾಮಿ, ಸಮುದಾಯ ಸಂಚಾಲಕರಾದ ಸಂಗೀತಾ, ಶ್ರೀದೇವಿ, ಮೇಲ್ವಿಚಾರಕಾರದ ಲಕ್ಷ್ಮಣ, ಯೂಸ್ೂ, ಭೋಗೇಶ ಆದಾಪುರ, ದುರಗಪ್ಪ, ಭೀಮಣ್ಣ, ಮಂಜುನಾಥ, ಕಷ್ಣ, ಗಂಗಮ್ಮ, ಬಸಮ್ಮ ಇತರರಿದ್ದರು.