ಬೆಟಗೇರಿ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಪ್ರವಚನಕ್ಕೆ ಗಣ್ಯರು ಚಾಲನೆ ನೀಡಿದರು. ಶ್ರೀ ಮಹಾದೇವ ಸ್ವಾಮೀಜಿ, ಶ್ರೀ ಚಿದಾನಂದ ಸ್ವಾಮೀಜಿ, ಪ್ರಮುಖರಾದ ದುರುಗಪ್ಪ, ಲಲಿತಾ, ವೀರೇಶ, ಶಂಕ್ರಪ್ಪ, ಶರಣಪ್ಪ ಇದ್ದರು. 
ಕೊಪ್ಪಳ

ಭಕ್ತಿ ಮಾರ್ಗದಲ್ಲಿ ನಡೆಸುವುದೇ ಪುರಾಣ

ಪ್ರವೀಣ ಉದುಸಾ ದಲಬಂಜನ್
ಅಳವಂಡಿ: ಸಮಾಜದಲ್ಲಿ ಧಾರ್ಮಿಕ ಕಾರ್ಯಗಳು ನೆರವೇರುವುದರಿಂದ ಸಾಮರಸ್ಯದ ಬದುಕು ಕಾಣಲು ಸಾಧ್ಯ ಎಂದು ಕುಕನೂರು ಬೆಟಗೇರಿ ಶ್ರೀ ಅನ್ನದಾನೇಶ್ವರ ಶಾಖಾಮಠದ ಮಹಾದೇವ ಸ್ವಾಮೀಜಿ ಹೇಳಿದರು.
ಸಮೀಪದ ಬೆಟಗೇರಿ ಗ್ರಾಮದ ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಶಾಖಾಮಠದಲ್ಲಿ ಜ.ಅನ್ನದಾನೇಶ್ವರ ಸಂಸ್ಥಾನ ಮಠದ ಶ್ರೀ ಅನ್ನದಾನೇಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಹಾಗೂ ಗ್ರಾಮದ ಶಾಖಾ ಮಠದ ಪ್ರಥಮ ವಾರ್ಷಿಕೋತ್ಸವ ಅಂಗವಾಗಿ ಜ. ಅನ್ನದಾನೇಶ್ವರ ಶಿವಯೋಗಿಗಳವರ ಪ್ರವಚನಕ್ಕೆ ಸೋಮವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.
ಭಗವಂತ, ಶರಣರು, ಮಹಾತ್ಮರ ಜೀವನ ಚರಿತ್ರೆಗಳನ್ನು ಕೇಳುವುದರಿಂದ ವ್ಯಕ್ತಿತ್ವ ಉನ್ನತಿಗೊಳ್ಳುತ್ತದೆ. ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜತೆಗೆ ಆತನಲ್ಲಿಯ ದುರ್ಗುಣಗಳನ್ನು ತೊಡೆದು ಹಾಕುವುದಾಗಿ ಎಂದರು.
ತಾಪಂ ಮಾಜಿ ಸದಸ್ಯ ವೀರೇಶ ಸಜ್ಜನ ಮಾತನಾಡಿ, ಮುಂಡರಗಿ ಶ್ರೀಮಠವು ನಮ್ಮಂತ ಸಾಕಷ್ಟು ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದನಿಲಯಗಳನ್ನು ಸ್ಥಾಪಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದೆ ಎಂದರು.
ಹಿರಿಯರಾದ ಶಂಕ್ರಪ್ಪ ಬಡಿಗೇರ ಮಾತನಾಡಿ, ನಮ್ಮ ಗ್ರಾಮದವರು ಮುಂಡರಗಿ ಪೀಠಕ್ಕೆ ಸ್ವಾಮೀಜಿಗಳಾಗಿ ಹಲವು ಲೀಲೆಗಳನ್ನು  ಮಾಡಿದ್ದಾರೆ. ಅಂತಹ ಮಹಾನ್ ಪೂಜ್ಯರ ಪಡೆದಿರುವುದು ನಮ್ಮ ಗ್ರಾಮದ ಪುಣ್ಯ. ಭಕ್ತನನ್ನೂ ಕೂಡ ಶ್ರೀಮಠವು ಜಗದ್ಗುರುಗಳನ್ನಾಗಿ ಮಾಡಿಕೊಂಡಿದ್ದು ಆ ಮಠದ ಭವ್ಯ ಪರಂಪರೆ ತಿಳಿಸುತ್ತದೆ ಎಂದರು.
ಪ್ರವಚನದ ನಂತರ ಹಳೆಯ ವಿದ್ಯಾರ್ಥಿಗಳಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಹಾದಾಸೋಹ ಸೇವೆ ನಡೆಯಿತು. ತೊಳಲಿಯ ವೇದಮೂರ್ತಿ ಶ್ರೀ ಕುಮಾರಸ್ವಾಮಿ ಶಾಸ್ತ್ರಿಗಳು ಪ್ರವಚನ ನಡೆಸಿಕೊಟ್ಟರು. ಸಂಗೀತ ಸೇವೆಯನ್ನು ಕವಲೂರಿನ ವೆಂಕಣ್ಣ ವರಕನಹಳ್ಳಿ ಹಾಗೂ ಕುರಹಟ್ಟಿಯ ಬಸವರಾಜ ಹುಯಿಳಗೊಳ ನಡೆಸಿಕೊಟ್ಟರು.
ಹಿರೇಸಿಂದೋಗಿ ಶ್ರೀ ಚಿದಾನಂದ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ದುರುಗಪ್ಪ ಭಜಂತ್ರಿ, ಉಪಾಧ್ಯಕ್ಷ ಲಲಿತಾ ಮಡಿವಾಳರ, ಪ್ರಮುಖರಾದ ಸಿದ್ದಣ್ಣ ಸಜ್ಜನ, ಹನುಮಗೌಡ ತಿಗರಿ, ರಾಮಣ್ಣ ತಿಗರಿ, ಅಂದಾನಯ್ಯ ಬೋಚನಹಳ್ಳಿ, ಗುರಯ್ಯ ಮೈನಳ್ಳಿ, ಶರಣಪ್ಪ ಮಡಿವಾಳರ, ಪರಮೇಶಪ್ಪ ಕಂಚಿ, ಪ್ರಭು ಶಿವಸಿಂಪರ, ಬಸವರಾಜ ನಾಗರೆಡ್ಡಿ, ರಾಮಣ್ಣ, ಶರಣಯ್ಯ, ಅಂದಾನಯ್ಯ,   ನವೀನಕುಮಾರ, ಮುತ್ತಯ್ಯ ಹಿರೇಮಠ, ಚಂಬಣ್ಣ ಕೊಪ್ಪಳ ಇತರರಿದ್ದರು.