ಗಂಗಾವತಿ ನೀಲಕಂಠೇಶ್ವರ ನಗರದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಡಾ. ಪುನೀತ್ ರಾಜಕುಮಾರ ಜನ್ಮದಿನ ನಿಮಿತ್ತ ಗೃಹಿಣಿ ರೇಖಾಶಿವಶಂಕರ ರಕ್ತದಾನ ಮಾಡಿದರು. ಕುರಹಿನಶೆಟ್ಟಿ ಸಮಾಜದ ಪ್ರಮುಖರಾದ ಶ್ಯಾವಿ ತಿಪ್ಪಣ್ಣ, ಕುರಗೋಡು ಬಸವರಾಜ, ಎಂ.ರವೀಂದ್ರನಾಥ ನಾಗಪ್ಪ, ಸಂಚಾಲಕ ಬಸವರಾಜ ಐಲಿ ಇತರರಿದ್ದರು.
ಗಂಗಾವತಿ: ಇಲ್ಲಿನ ನೀಲಕಂಠೇಶ್ವರ ನಗರದಲ್ಲಿ ಅಪ್ಪು ಅಭಿಮಾನಿ ಬಳಗದಿಂದ ಡಾ. ಪುನೀತ್ ರಾಜಕುಮಾರ ಜನ್ಮದಿನ ನಿಮಿತ್ತ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಮತ್ತು ಗೋಪಿ ಚಾರಿಟಬಲ್ ರಕ್ತ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಶಿಬಿರದಲ್ಲಿ 51 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನಂತರ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ಸಂಘದ ಸಂಚಾಲಕ ಬಸವರಾಜ ಐಲಿ ಮಾತನಾಡಿ, ನಟನೆ ಮೂಲಕ ಜನರ ಮನ ಗೆದ್ದ ಪುನೀತ್ ರಾಜಕುಮಾರ ನಗುವಿನ ಒಡೆಯ. ಕಲೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ರಾಜ್ ಕುಟುಂಬ ಸಕ್ರಿಯವಾಗಿದೆ ಎಂದರು.
ಕುರಹಿನಶೆಟ್ಟಿ ಸಮಾಜದ ಪ್ರಮುಖರಾದ ಶ್ಯಾವಿ ತಿಪ್ಪಣ್ಣ, ಕುರಗೋಡು ಬಸವರಾಜ, ಎಂ.ರವೀಂದ್ರನಾಥ ನಾಗಪ್ಪ, ವಾರ್ಡ್ ಮುಖಂಡರಾದ ನಂಡುಂಜಪ್ಪ ಬಜಾರ, ಶ್ಯಾವಿ ಅಶೋಕ, ಮಾರುತಿ ಐಲಿ, ವಿರೂಪಾಕ್ಷಪ್ಪ ಶಿರವಾರ, ಮಲ್ಲಿಕಾರ್ಜು ಪೋಲ್ಕಲ್, ಬಗನಾಳ ಶಿವಪ್ಪ, ಶ್ಯಾಮಣ್ಣ ಶಿರವಾರ, ಅರುಣ ಬಜಾರ, ನಂಜುಂಡ ಐಲಿ, ಲಕ್ಷ್ಮಣ ನಾಯಕ್, ಮನು ಇತರರಿದ್ದರು.