ಕುಕನೂರಿನಲ್ಲಿ ತಹಸಿಲ್ ಕಚೇರಿಯ ಶಿರಸ್ತೇದಾರ್ ಸುರೇಶ ಬಾಳೆಹೊಸೂರಗೆ ಮಾದಿಗ ಸಮುದಾಯದಿಂದ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ನಿಂಗಪ್ಪ ಗೋರ್ಲೆಕೊಪ್ಪ, ಮಲಿಯಪ್ಪ ಅಣ್ಣಿಗೇರಿ, ಮಾರುತಿ ಭಂಡಾರಿ, ಚಂದ್ರಪ್ಪ ಆರುಬೆರಳಿನ, ಶರಣಪ್ಪ ಹಿರೇಮನಿ, ಮಲ್ಲಿಕಾರ್ಜುನ ಗೋರ್ಲೆಕೊಪ್ಪ ಇತರರಿದ್ದರು. 
ಕೊಪ್ಪಳ

ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ

ಪ್ರಮುಖ ಮುಖ್ಯಾಂಶಗಳು

  • ಮನವಿ

ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ

ಕುಕನೂರು: ರಾಜ್ಯ ಸರ್ಕಾರ ಕೂಡಲೇ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಮಾದಿಗ ಸಮುದಾಯದಿಂದ ಪಟ್ಟಣದ ತಹಸೀಲ್ ಕಚೇರಿಯ ಶಿರಸ್ತೇದಾರ್ ಸುರೇಶ ಬಾಳೆಹೊಸೂರ ಮೂಲಕ ಸಿಎಂ ಸಿದ್ದರಾಮಯ್ಯಗೆ ಬುಧವಾರ ಮನವಿ ಸಲ್ಲಿಲಾಯಿತು.

ಒಳಮೀಸಲಾತಿಗಾಗಿ ಮಾದಿಗ ಸಮುದಾಯ ಸುಮಾರು 35 ವರ್ಷಗಳ ಕಾಲ ಸುದೀರ್ಘ ಹೋರಾಟಗಳನ್ನು ಮಾಡುತ್ತಿದೆ. 2 2024 ಆ.1ರಂದು ಪಜಾ, ಪಪ ಮೀಸಲಾತಿಯಲ್ಲಿ ಉಪ-ವರ್ಗೀಕರಣ ಮಾಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. 
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ 6:1 ಅನುಪಾತದಲ್ಲಿ ಅತಿ ಹಿಂದುಳಿದ ಸಮುದಾಯಗಳಿಗೆ ಒಳಮೀಸಲಾತಿ ನೀಡಲು ರಾಜ್ಯಗಳು ಅಧಿಕೃತ ದತ್ತಾಂಶದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ. ಸರ್ಕಾರ ರೋಸ್ಟರ್ ನೆಪ ಮಾಡಿಕೊಂಡು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಣಿದು, ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸುತ್ತಿದೆ. ಕೂಡಲೇ ಒಳಮೀಸಲಾತಿ ಜಾರಿಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ ಎಂದು ಆಗ್ರಹಿಸಿದರು.

ಆಹಾರ ಇಲಾಖೆ ಅಧಿಕಾರಿ ಮಂಜುನಾಥ ಹಲಗೇರಿ, ಪ್ರಮುಖರಾದ ನಿಂಗಪ್ಪ ಗೋರ್ಲೆಕೊಪ್ಪ, ಮಲಿಯಪ್ಪ ಅಣ್ಣಿಗೇರಿ, ಮಾರುತಿ ಭಂಡಾರಿ, ಚಂದ್ರಪ್ಪ ಆರುಬೆರಳಿನ, ಶರಣಪ್ಪ ಹಿರೇಮನಿ, ಮಲ್ಲಿಕಾರ್ಜುನ ಗೋರ್ಲೆಕೊಪ್ಪ, ಪ್ರಶಾಂತ್ ಆರುಬೆರಳಿನ, ಹನುಮಂತಪ್ಪ ರಾವಣಕಿ, ಶ್ರೀಧರ್ ಭಂಡಾರಿ, ಭೀಮಣ್ಣ ಬೂದಗುಂಪ, ಪ್ರಕಾಶ್ ಉಜ್ಜನವರ, ಶಂಕರ್ ಭಂಡಾರಿ ಇತರರಿದ್ದರು.