ಮತಪರಿಷ್ಕರಣೆ ಕಾರ್ಯಕ್ಕೆ ಬಿಜೆಪಿಯಿಂದ ಮತಗಟ್ಟೆಗಳ ಪ್ರತಿನಿಧಿಗಳ ಪಟ್ಟಿಯನ್ನು ಅಂಗಿಕರಿಸುವಂತೆ ಗಂಗಾವತಿ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಉಪತಹಸೀಲ್ದಾರ್ ಮಹೆಬೂಬ್‌ಅಲಿಗೆ ಮಾಹಿತಿ ಪಟ್ಟಿ ಸಲ್ಲಿಸಲಾಯಿತು. ವಿಧಾನಸಭೆ ಕ್ಷೇತ್ರದ ಬಿಎಲ್‌ಎ1 ವೀರೇಶ ಬಲ್ಕುಂದಿ, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಸಾದ ಹಲ್ಟಿ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು ಇತರರಿದ್ದರು. 
ಕೊಪ್ಪಳ

ಮತ ಪರಿಷ್ಕರಣೆಗೆ ಗುರುತಿನ ಪತ್ರ ನೀಡಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಉಪತಹಸೀಲ್ದಾರ್ ಮಹೆಬೂಬ್‌ಅಲಿಗೆ ಮಾಹಿತಿ
  • ಪಟ್ಟಿ ಸಲ್ಲಿಕೆ
  • ಬಿಜೆಪಿ ಪ್ರತಿನಿಧಿ
ಗಂಗಾವತಿ: ಎಸ್‌ಐಆರ್ ಭಾಗವಾಗಿ ನಡೆಯುತ್ತಿರುವ ಮತಪರಿಷ್ಕರಣೆ ಕಾರ್ಯಕ್ಕೆ ಬಿಜೆಪಿಯಿಂದ ಮತಗಟ್ಟೆಗಳ ಪ್ರತಿನಿಧಿಗಳ ಪಟ್ಟಿಯನ್ನು ಅಂಗೀಕರಿಸುವಂತೆ ಉಪತಹಸೀಲ್ದಾರ್ ಮಹೆಬೂಬ್‌ಅಲಿಗೆ ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಮಂಗಳವಾರ ಮಾಹಿತಿ ಪಟ್ಟಿ ಸಲ್ಲಿಸಲಾಯಿತು.
ಗಂಗಾವತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 235 ಮತಗಟ್ಟೆಗಳಿಗೆ ಬಿಎಲ್‌ಎ2ಗಳನ್ನು ನಿಯೋಜಿಸಲಾಗಿದ್ದು, ಎಲ್ಲರ ಮಾಹಿತಿಯನ್ನುಒಳಗೊಂಡ ಪಟ್ಟಿಯನ್ನು ಸಲ್ಲಿಸಲಾಯಿತು. ವಿಧಾನಸಭೆ ಕ್ಷೇತ್ರದ ಬಿಎಲ್‌ಎ1 ವೀರೇಶ ಬಲ್ಕುಂದಿ ಮಾತನಾಡಿ, ಚುನಾವಣಾ ಆಯೋಗದ ನಿಯಮಾವಳಿಯಂತೆ ಬಿಎಲ್‌ಎ2 ಪ್ರತಿನಿಧಿಗಳನ್ನು ಎಲ್ಲ ಮತಗಟ್ಟೆಗಳಿಗೆ ನಿಯೋಜಿಸಲಾಗಿದ್ದು, ಎಸ್‌ಐಆರ್ ಮತ ಪರಿಷ್ಕರಣೆ ಸಂದರ್ಭದಲ್ಲಿ ಪ್ರತಿನಿಧಿಗಳನ್ನು ಪರಿಗಣಿಸಬೇಕು. ಅಗತ್ಯವಿರುವ ಗುರುತಿನ ಪತ್ರವನ್ನು ನೀಡುವಂತೆ ಮನವಿ ಮಾಡಿದರು.
ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಸಾದ ಹಲ್ಟಿ, ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು, ಪ್ರಮುಖರಾದ ವೀರೇಶ ಸುಳೇಕಲ್, ಆನಂದಗೌಡ ಇತರರಿದ್ದರು.