ಕೊಪ್ಪಳದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಫೀಲ್ಡ್ ಟ್ರೇನರ್ಗಳ ತರಬೇತಿ ಕಾರ್ಯಾಗಾರದಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಬೆಂಗಳೂರಿನ ಜನಗಣತಿ ಕೇಂದ್ರ ಕಚೇರಿಯ ಮಾಸ್ಟರ್ ಟೆನರ್ ಫಣಿ ಕುಮಾರ್ ಹಾಗೂ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್ ಇದ್ದರು.
- ಡಿಸಿ ಡಾ. ಸುರೇಶ್ ಇಟ್ನಾಳ ಸೂಚನೆ
- ಫೀಲ್ಡ್ ಟ್ರೇನರ್ಗಳ ತರಬೇತಿ ಕಾರ್ಯಗಾರ
ಕೊಪ್ಪಳ : ದೇಶದ ಅಭಿವೃದ್ಧಿ ಯೋಜನೆಗಳ ರೂಪಿಸುವಲ್ಲಿ ಜನಗಣತಿಯ ಅಂಕಿ-ಅಂಶಗಳು ಅಡಿಪಾಯವಾಗಿದ್ದು, ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಫೀಲ್ಡ್ ಟ್ರೇನರ್ಗಳು ಸಮರ್ಥವಾಗಿ ತರಬೇತಿ ನೀಡಬೇಕು ಎಂದು ಡಿಸಿ ಡಾ. ಸುರೇಶ್ ಬಿ. ಇಟ್ನಾಳ ಹೇಳಿದರು.
ಕೊಪ್ಪಳ ಜಿಪಂ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಫೀಲ್ಡ್ ಟ್ರೇನರ್ಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಈ ಬಾರಿಯ ಜನಗಣತಿಯು ಹಳೆಯ ಮ್ಯಾನುಯಲ್ ಪದ್ಧತಿಯನ್ನು ಕೈಬಿಟ್ಟು, ಸಂಪೂರ್ಣವಾಗಿ ಮೊಬೈಲ್ ಆ್ಯಪ್ ಮೂಲಕ ನಡೆಯಲಿದೆ. ಇದು ಪ್ರಕ್ರಿಯೆಯಲ್ಲಿ ನಿಖರತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲಿದೆ. ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿಗಳು ಇದನ್ನು ರಾಷ್ಟ್ರ ನಿಮಾರ್ಣದ ಅಳಿಲು ಸೇವೆ ಎಂದು ಭಾವಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕೆಂದು ತಿಳಿಸಿದರು.
ಪ್ರತಿ ಗ್ರಾಮದಲ್ಲಿ 150 ರಿಂದ 200 ಕುಟುಂಬಗಳಿಗೊಂದು ಬ್ಲಾಕ್ ಗುರುತಿಸಿ, ನಿಖರವಾದ ನಕ್ಷೆ ಮತ್ತು ಪಟ್ಟಿ ಸಿದ್ಧಪಡಿಸಬೇಕು. ಬ್ಲಾಕ್ ರಚನೆಯಲ್ಲಿ ಸಣ್ಣ ತಪ್ಪಾದರೂ ಇಡೀ ಪ್ರಕ್ರಿಯೆ ಹಳಿ ತಪ್ಪುತ್ತದೆ. ಆದ್ದರಿಂದ ಅಧಿಕಾರಿಗಳು ಪ್ರತಿ ಬ್ಲಾಕ್ಗೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಗಣತಿದಾರರನ್ನು ಅವರು ವಾಸಿಸುವ ಅಥವಾ ಕೆಲಸ ಮಾಡುವ ಬ್ಲಾಕ್ಗಳಲ್ಲೇ ನಿಯೋಜಿಸಬೇಕು. ಸ್ಥಳಿಯರು ಲಭ್ಯವಿಲ್ಲದಿದ್ದರೆ ಮಾತ್ರ 200 ಮೀಟರ್ ವ್ಯಾಪ್ತಿಯ ಸರ್ಕಾರಿ ನೌಕರರನ್ನು ಬಳಸಿಕೊಳ್ಳಬೇಕು. ವಾರ್ಡ್ ಬಿಲ್ ಕಲೆಕ್ಟರ್ಗಳು ಹಾಗೂ ಕ್ಷೇತ್ರ ಮಟ್ಟದ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಬೆಂಗಳೂರಿನ ಜನಗಣತಿ ಕೇಂದ್ರ ಕಚೇರಿಯ ಮಾಸ್ಟರ್ ಟೆನರ್ ಫಣಿ ಕುಮಾರ್ ಹಾಗೂ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶಿವಶಂಕರ ಕರಡಕಲ್ ಹಾಗೂ ಫೀಲ್ಡ್ ಟ್ರೇನರ್ಗಳಿದ್ದರು.