ಯಲಬುರ್ಗಾ ತಾಲೂಕಿನ ಕಲಭಾವಿ ಕ್ರಾಸ್‌ನಲ್ಲಿ ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. 
ಕೊಪ್ಪಳ

ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ಸಾರಿಗೆ ಘಟಕಕ್ಕೆ ವಿದ್ಯಾರ್ಥಿಗಳ ಮನವಿ
  • ಬಸ್ ಸಂಚಾರ ತಡೆದು ಪ್ರತಿಭಟನೆ
ಯಲಬುರ್ಗಾ: ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಕಲಭಾವಿ ಕ್ರಾಸ್‌ನಲ್ಲಿ ಗುರುವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಸ್ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನಿತ್ಯ ಶಾಲಾ-ಕಾಲೇಜುಗಳಿಗೆ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ತೆರಳಬೇಕಿದ್ದು ಅಸಮರ್ಪಕ ಬಸ್ ವ್ಯವಸ್ಥೆಯಿಂದ ಸಕಾಲಕ್ಕೆ ತರಗತಿಗೆ ತಲುಪಲು ಸಮಸ್ಯೆಯಾಗುತ್ತಿದೆ.
ಬೆಳಗ್ಗೆ 9ಕ್ಕೆ ಚಿಕ್ಕಮನ್ನಾಪುರದಿಂದ ತಾಳಕೇರಿ, ಕಲಭಾವಿ, ಹಿರೇವಂಕಲಕುಂಟಾ ಮಾರ್ಗವಾಗಿ ಕೊಪ್ಪಳಕ್ಕೆ ಬಂದು ಚಿಕ್ಕಮನ್ನಾಪುರ, ತಾಳಕೇರಿ, ಕಲಭಾವಿ, ಹಿರೇವಂಕಲಕುಂಟಾ ಮಾರ್ಗವಾಗಿ ಕುಷ್ಟಗಿಗೆ ತೆರಳುವ ಬಸ್‌ಗಳು ಕಿಕ್ಕಿರಿದು ತುಂಬಿರುತ್ತವೆ. ಆದ್ದರಿಂದ ಹೆಚ್ಚುವರಿ ಬಸ್ ಬಿಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.