ಪ್ರತಿಭಟನೆ ಕುರಿತ ಕರಪತ್ರ ಬಿಡುಗಡೆ 
ಕೊಪ್ಪಳ

ಬಿಜೆಪಿಯಿಂದ ಪ್ರತಿಭಟನೆ ಜು.31ರಂದು

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ನೀರು ಬಿಡುಗಡೆಗೆ ಆಗ್ರಹ
ಕೊಪ್ಪಳ: ವಿಜಯನಗರ ಕಾಲುವೆಗಳಿಗೆ ನೀರು ಬಿಡುಗಡೆಗೆ ಆಗ್ರಹಿಸಿ ಜು.31ರಂದು ಗಂಗಾವತಿ ತಾಲೂಕಿನ ಅಂಜನಾದ್ರಿಯಿಂದ ಮುನಿರಾಬಾದ್​ವರೆಗೆ ಬೃಹತ್​ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.
ನರಗದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದಲ್ಲಿ ಸದ್ಯ 35 ಟಿಎಂಸಿ ನೀರು ಸಂಗ್ರಹವಿದೆ. ವಿಜಯನಗರ ಕಾಲುವೆಗಳಿಗೆ ವರ್ಷದ 11 ತಿಂಗಳು ನೀರು ಬಿಡಬೇಕು. ಅದು ಕೇವಲ 1.45 ಟಿಎಂಸಿ ಅಡಿ. ಸರ್ಕಾರ ಕುಡಿಯಲು ಮಾತ್ರ ಜಲಾಶಯದ ನೀರು ಬಳಸುವುದಾಗಿ ಹೇಳುತ್ತಿದೆ. ಆದರೆ, ಬಚಾವತ್​ ತೀರ್ಪಿನಂತೆ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲೇಬೇಕು. 1.5 ಟಿಎಂಸಿ ಜಲ ಹರಿಸುವುದರಿಂದ ಜಲಾಶದ ನೀರಿನಲ್ಲಿ ಅಂಥ ವ್ಯತ್ಯಾಸ ಆಗದು. ಕುಡಿವ ನೀರು ಅಭಾದಿತ. ಆದರೆ, ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಹಿಂದಿನ ವರ್ಷ ಕ್ರಸ್ಟ್​ ಗೇಟ್​ ಅಳವಡಿಕೆ ಪರಿಣಾಮ ಬೆಳೆಗೆ ನೀರು ಸಿಕ್ಕಿಲ್ಲ. ಈ ವರ್ಷವೂ ನೀರು ನೀಡದಿದ್ದರೆ ರೈತರು ಏನು ಮಾಡಬೇಕೆಂದು ಪ್ರಶ್ನಿಸಿದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ನಾವು ಕೆಲ ದಿನಗಳ ಹಿಂದೆ ಮನವಿ ಸಲ್ಲಿಸಿದ್ದೇವೆ. ನೀರಾವರಿ ಅಧಿಕಾರಿಗಳು, ಪ್ರಾದೇಶಿಕ ಆಯುಕ್ತರು ನಮ್ಮ ಮನವಿಗೆ ಸ್ಪಂದಿಸಿಲ್ಲ. ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಆಭಾಗದ ರೈತರನ್ನು ಕರೆದುಕೊಂಡು ಅಂಜನಾದ್ರಿಯಿಂದ ಮುನಿರಾಬಾದ್​ವರೆಗೆ ಬೈಕ್​, ಟ್ರಾ$್ಯಕ್ಟರ್​ ಮೂಲಕ ರೈತರೊಂದಿಗೆ ಯಾತ್ರೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುತ್ತೇವೆ. ಮಣಿಯದಿದ್ದರೆ ಹೋರಾಟ ಉಗ್ರವಾಗಲಿದೆ ಎಂದು ಎಚ್ಚಿರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್​ ಗುಳಗಣ್ಣವರ ಇದ್ದರು.