ಕೇಂದ್ರ ಸರ್ಕಾರ ಖಾತರಿಯೋಜನೆ ಸ್ವರೂಪ ಬದಲಿಸಲೆತ್ನಿಸುತ್ತಿರುವ ಕಾಯ್ದೆ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ದಾಸನಾಳ ಗ್ರಾಮ ಘಟಕದ ಸದಸ್ಯರು ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಪಂ ಕಚೇರಿ ಮುಂದೆ ಪ್ರತಿಭಟಿಸಿ,ಬೇಡಿಕೆ ಮನವಿಯನ್ನು ಪಿಡಿಒ ಕೃಷ್ಣರಿಗೆ ಮಂಗಳವಾರ ಸಲ್ಲಿಸಿದರು. ತಾಲೂಕಾಧ್ಯಕ್ಷ ಶ್ರೀನಿವಾಸ, ಕಾರ್ಯದರ್ಶಿ ಮುತ್ತಣ್ಣ ದಾಸನಾಳ್, ಪದಾಧಿಕಾರಿಗಳಾದ ಬಾಳಪ್ಪ ಹುಲಿಹೈದರ್, ಚಾಂದಬೀ, ನೂರಜಹಾನ್‌ಬೀ ಇತರರಿದ್ದರು.
ಗಂಗಾವತಿ: ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಸ್ವರೂಪ ಬದಲಾವಣೆ ಯತ್ನದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ದಾಸನಾಳ ಗ್ರಾಮ ಘಟಕದ ಸದಸ್ಯರು ತಾಲೂಕಿನ ವೆಂಕಟಗಿರಿ ಗ್ರಾಪಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಪಿಡಿಒ ಕೃಷ್ಣಗೆ ಮನವಿ ಸಲ್ಲಿಸಿದರು.
ಸಂಘದ ತಾಲೂಕು ಕಾರ್ಯದರ್ಶಿ ಮುತ್ತಣ್ಣ ದಾಸನಾಳ ಮಾತನಾಡಿ, ಖಾತ್ರಿ ಯೋಜನೆಯನ್ನು ವಿಬಿ ಜಿ ರಾಮ್ ಜಿ ಕಾಯ್ದೆ ಹೆಸರಿನಲ್ಲಿ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದ್ದು, ಇದರಿಂದ ಕೂಲಿಕಾರರಿಗೆ ಅನ್ಯಾಯವಾಗಲಿದೆ. ಗ್ರಾಮೀಣ ಭಾಗದ ಶೇ.40 ಗ್ರಾಮಸ್ಥರು ಖಾತ್ರಿ ಯೋಜನೆ ಮೇಲೆ ಅವಲಂಬಿತರಾಗಿದ್ದಾರೆ. ಹೊಸ ಕಾಯ್ದೆಯಿಂದ ಕೇಂದ್ರ ಶೇ.60 ನೀಡಿದರೆ, ರಾಜ್ಯ ಶೇ.40 ಅನುದಾನ ನೀಡಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನಡುವಿನ ಸಂಘರ್ಷದಿಂದ ಕೂಲಿಕಾರರ ಮೇಲೆ ಪರಿಣಾಮ ಬೀರಲಿದೆ. ಹಾಜರಾತಿ ಒಂದೇ ಸಲ ಪಡೆಯಬೇಕಿದ್ದು, ವರ್ಷಕ್ಕೆ 200 ಮಾನವ ದಿನಗಳನ್ನು ಸೃಷ್ಟಿಸಬೇಕು. 700 ರೂ. ಕೂಲಿ ನಿಗದಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಶ್ರೀನಿವಾಸ, ಪದಾಧಿಕಾರಿಗಳಾದ ನಿಂಗನಗೌಡ, ದುರುಗಪ್ಪ ಪೂಜಾರಿ, ಬೆಟ್ಟಪ್ಪ, ಬಸಪ್ಪ, ಗಾದೆಪ್ಪ ಬೆಣಕಲ್, ಶರಣಪ್ಪ, ಚಾಂದಬೀ, ನೂರ್‌ಜಹಾನ್ ಬೀ, ಶಂಕರಗೌಡ, ಪಂಪಾಪತಿ, ಹನುಮೇಶ ದಾಸನಾಳ್, ಮಹಾಂತಮ್ಮ ದಾಸನಾಳ, ಯಮನೂರ್ ಸಾಬ್, ಬೆಟ್ಟದಪ್ಪ, ಹನುಮಮ್ಮ, ಶರಣಪ್ಪ, ಕೀರ್‌ಸಾಬ್, ಗೌರಮ್ಮ, ಕೆರೆಹನುಮಂತಪ್ಪ, ಬಾಳಪ್ಪ ಹುಲಿಹೈದರ್ ಇತರರಿದ್ದರು.