ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ ಆಶಾಗಳನ್ನು ಬಳಸಿಕೊಳ್ಳದಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಶುಕ್ರವಾರ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಲಾಲಬೀ, ವಿಜಯಲಕ್ಷ್ಮೀ ಆಚಾರ್, ಗೌಸಿಯಾ, ಅನ್ನಪೂರ್ಣಾ ಇತರರಿದ್ದರು. 
ಕೊಪ್ಪಳ

ಆಶಾಗಳಿಗೆ ಅನ್ಯ ಕಾರ್ಯನಿಯೋಜನೆ ಸಲ್ಲ

ಗಂಗಾವತಿ: ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳದಂತೆ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ತಾಲೂಕು ಸಮಿತಿ ಸದಸ್ಯರು ತಾಲೂಕಾಡಳಿತ ಸೌಧದ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರನ್ನು ಆರೋಗ್ಯೇತರ ಕೆಲಸದ ಹೊರೆಯಿಂದ ಮುಕ್ತಿಗೊಳಿಸಬೇಕಿದ್ದು, ಯಾವುದೇ ಕಾರಣಕ್ಕೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಣೆಗೆ ಬಳಸಿಕೊಳ್ಳಬಾರದು. ಗರ್ಭಿಣಿ, ಬಾಣಂತಿಯರು, ನವಜಾತ ಶಿಶುಗಳು, ಮಕ್ಕಳ ಲಸಿಕೆ, ಕುಟುಂಬ ಕಲ್ಯಾಣ ಹಾಗೂ ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆಶಾಗಳನ್ನು ಬೇರೆ ಕಾರ್ಯಕ್ಕೆ ನಿಯೋಜಿಸಿದರೆ ಆರೋಗ್ಯ ಸೇವೆ ಕುಂಟಿತವಾಗುವ ಸಾಧ್ಯತೆಗಳಿವೆ.
ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ಮನೆಮನೆ ವಿತರಣಾ ಕಾರ್ಯಕ್ಕೆ ಯಾವುದೇ ಸಂಭಾವನೆ, ಪ್ರಯಾಣ ಭತ್ಯೆ, ಸ್ಮಾರ್ಟ್‌ೆನ್ ಅಥವಾ ಅಗತ್ಯ ಸೌಲಭ್ಯ ಸರ್ಕಾರ ೋಷಿಸಿಲ್ಲ. ಇತರ ಕೆಲಸಗಳಿಂದ ಕೈಬಿಡುವಂತೆ ಸಂಘದ ಪದಾಧಿಕಾರಿಗಳಾದ ಲಾಲಬೀ, ವಿಜಯಲಕ್ಷ್ಮೀ ಆಚಾರ್, ಗೌಸಿಯಾ, ಅನ್ನಪೂರ್ಣಾ ಇತರರು ಒತ್ತಾಯಿಸಿದರು.