ಗೌರವಧನ ಕಡಿತಗೊಳಿಸಿರುವ ವಿವಿ ಕ್ರಮ ಖಂಡಿಸಿ ಗಂಗಾವತಿ ಶ್ರೀವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಮೌಲ್ಯಮಾಪನ ನಿರತರಾಗಿದ್ದ ಪದವಿ ಕಾಲೇಜುಗಳ ಉಪನ್ಯಾಸಕರು ವಿವಿ ಸಿಂಡಿಕೇಟ್ ಸದಸ್ಯ ಅಭಿಷೇಕ್‌ಗೆ ಮನವಿ ಸಲ್ಲಿಸಿದರು. ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ, ಡಾ.ಸರ್ರಾಜ್ ಅಹ್ಮದ್, ಅತಿಥಿ ಉಪನ್ಯಾಸಕರಾದ ಡಾ.ತುಕಾರಾಂ ನಾಯಕ, ಡಾ.ಬಸವರಾಜ ಗೌಡನಬಾವಿ, ಡಾ.ಪಾಗುಂಡಪ್ಪ, ಗುಂಡೂರು ಪವನ ಕುಮಾರ್ ಇತರರಿದ್ದರು. 
ಕೊಪ್ಪಳ

ಉಪನ್ಯಾಸಕರಿಂದ ಮೌಲ್ಯಪಾಪನ ಸ್ಥಗಿತ

ಪ್ರಮುಖ ಮುಖ್ಯಾಂಶಗಳು

  • ಗೌರವಧನ ಸಂದಾಯಕ್ಕೆ ಮನವಿ
  • ಕೊಪ್ಪಳ ವಿವಿ ಕ್ರಮಕ್ಕೆ ಖಂಡನೆ
ಗಂಗಾವತಿ: ಮೌಲ್ಯಮಾಪನದ ಗೌರವಧನ ಕಡಿತಗೊಳಿಸಿರುವ ಕೊಪ್ಪಳ ವಿವಿ ಕ್ರಮ ಖಂಡಿಸಿ ನಗರದ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಮೌಲ್ಯಮಾಪನ ನಿರತರಾಗಿದ್ದ ಪದವಿ ಕಾಲೇಜುಗಳ ಉಪನ್ಯಾಸಕರು ಕಾರ್ಯ ಸ್ಥಗಿತಗೊಳಿಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಕೊಪ್ಪಳ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳ ಮೌಲ್ಯ ಮಾಪನ ಕಾರ್ಯ ಬಹಿಷ್ಕರಿಸಿದ ಉಪನ್ಯಾಸಕರು, ಬೇಡಿಕೆ ಮನವಿಯನ್ನು ಸಿಂಡಿಕೇಟ್ ಸದಸ್ಯ ಅಭಿಷೇಕ್‌ಗೆ ಸಲ್ಲಿಸಿದರು. ಕಳೆದ ಸಾಲಿನಲ್ಲಿ ಮಾಲ್ಯಮಾಪನ ಹಣವನ್ನು ಅವೈಜ್ಞಾನಿಕ ರೀತಿಯಲ್ಲಿ ಕಡಿತಗೊಳಿಸಿದ್ದು, ವಿವಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸರಿಪಡಿಸಬೇಕಿದ್ದ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದು, ಪುನಃ ಮೌಲ್ಯಮಾಪನಕ್ಕೆ ಆದೇಶಿಸಿದ್ದಾರೆ. ಕಳೆದೆರಡು ತಿಂಗಳಿಂದ ಸರಿಪಡಿಸುವ ಭರವಸೆ ನೀಡಿದ್ದ ಅಧಿಕಾರಿಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಕಡಿತಗೊಂಡ ಹಣ ದೊರೆಯುವವರೆಗೂ ಮೌಲ್ಯಮಾಪನಕ್ಕೆ ಹಾಜರಾಗಲ್ಲ ಎಂದು ಉಪನ್ಯಾಸಕರು ತಿಳಿಸಿದರು.
ಮೌಲ್ಯಮಾಪನಕ್ಕಾಗಿ ಬಂದಿದ್ದ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರು, ಅಳವಂಡಿ, ಹಿಟ್ನಾಳ, ಬಂಡಿಹರ್ಲಾಪುರ, ಕನಕಗಿರಿ, ತಾವರಗೇರಾ, ಹಿರೇವಂಕಲಕುಂಟ, ಗಂಗಾವತಿ, ಶ್ರೀರಾಮನಗರದ ಉಪನ್ಯಾಸಕರು ಕಾರ್ಯ ಸ್ಥಗಿತಗೊಳಿಸಿ ಮೌಲ್ಯಮಾಪನ ಕೇಂದ್ರದಿಂದ ಹೊರ ನಡೆದರು.
ಪ್ರಾಧ್ಯಾಪಕರಾದ ಡಾ.ಮುಮ್ತಾಜ್ ಬೇಗಂ, ಡಾ.ಸರ್ರಾಜ್ ಅಹ್ಮದ್, ಅತಿಥಿ ಉಪನ್ಯಾಸಕರಾದ ಡಾ.ತುಕಾರಾಂ ನಾಯಕ, ಡಾ.ಬಸವರಾಜ ಗೌಡನಬಾವಿ, ಡಾ.ಪಾಗುಂಡಪ್ಪ, ಗುಂಡೂರು ಪವನ ಕುಮಾರ್, ಡಾ.ಬಸವರಾಜ ತಿಮಲಾಪುರ, ಡಾ.ಸೋಮೇಶ, ಡಾ.ಷಣ್ಮುಖಪ್ಪ, ಮಂಜುನಾಥ ಬಾಣದ, ಪುನೀತಾ, ಮೀಟಾನಾಯಕ, ಮಂಜುಳಾ, ಮಲ್ಲನಗೌಡ, ಡಾ.ಉಷಾರಾಣಿ, ಸೋಮಶೇಖರ, ಕಾರಟಗಿ ವಿರೂಪಾಕ್ಷೇಶ್ವರಸ್ವಾಮಿ, ಶಿವಬಸಪ್ಪ ಮಸ್ಕಿ, ಹನುಮಂತ, ಮಹಾಂತೇಶ, ಡಾ.ಪದ್ಮಶ್ರೀ, ಡಾ.ಲಕ್ಷ್ಮೀಬಾಯಿ, ಸುಮಲತಾ ಇತರರಿದ್ದರು.