ಬಸವ ಕಲ್ಯಾಣದಲ್ಲಿ ಕನ್ನೇರಿ ಮಠದ ಶ್ರೀಗಳು ಆಯೋಜಿಸಿರುವ ಬಸವ ಕಲ್ಯಾಣ ಕಾರ್ಯಕ್ರಮ ನಿಷೇಧಿಸುವಂತೆ ಒತ್ತಾಯಿಸಿ ಬಸವಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಗಂಗಾವತಿ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಬಸವಕೇಂದ್ರದ ಅಧ್ಯಕ್ಷ ಕೆ.ಬಸವರಾಜ, ವಿವಿಧ ಸಂಘಟನೆ ಪದಾಧಿಕಾರಿಗಳಾದ ದಿಲೀಪ್ ಕುಮಾರ ವಂದಾಲ, ಚನ್ನಬಸಮ್ಮ ಕಂಪ್ಲಿ, ಹನುಮಂತಪ್ಪ ಸರಿಗಮ, ಸಿ.ಎಚ್. ನಾರಿನಾಳ್ ಇತರರಿದ್ದರು.
- ಬಸವಪರ ಸಂಘಟನೆಗಳ ಒಕ್ಕೂಟ ಒತ್ತಾಯ
- ಕನ್ನೇರಿ ಮಠದ ಶ್ರೀಗಳ ನಡೆಗೆ ಆಕ್ಷೇಪ
ಗಂಗಾವತಿ: ಬಸವ ಕಲ್ಯಾಣದಲ್ಲಿ ಕನ್ನೇರಿ ಮಠದ ಶ್ರೀಗಳು ಆಯೋಜಿಸಿರುವ ಬಸವ ಕಲ್ಯಾಣ ಕಾರ್ಯಕ್ರಮ ನಿಷೇಧಿಸುವಂತೆ ಒತ್ತಾಯಿಸಿ ಬಸವಪರ ಸಂಘಟನೆಗಳ ಒಕ್ಕೂಟದ ಸದಸ್ಯರು ನಗರದ ಜಗಜ್ಯೋತಿ ಬಸವೇಶ್ವರ ವೃತ್ತದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಷ್ಟ್ರೀಯ ಬಸವ ದಳ, ಬಸವಕೇಂದ್ರ, ಶರಣ ಸಾಹಿತ್ಯ ಪರಿಷತ್ ಇತರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಒಕ್ಕೂಟದ ಸದಸ್ಯರು, ಬೇಡಿಕೆ ಮನವಿಯನ್ನು ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಸಲ್ಲಿಸಿದರು.
ಬಸವ ಕೇಂದ್ರದ ಅಧ್ಯಕ್ಷ ಕೆ.ಬಸವರಾಜ ಮಾತನಾಡಿ, ಮಠಾಧಿಪತಿಗಳನ್ನು ನಿಂದಿಸುತ್ತಿರುವ ಕನ್ನೇರಿ ಮಠದ ಶ್ರೀಗಳು ಸಮಾಜದಲ್ಲಿ ಆಶಾಂತಿ, ಕೋಮುವಾದ ಹರಡುತ್ತಿದ್ದಾರೆ. ಬಸವ ಭಕ್ತರ ಭಾವನಾತ್ಮಕ ಧರ್ಮ ಕ್ಷೇತ್ರ ಬಸವ ಕಲ್ಯಾಣದಲ್ಲಿ ಬಸವಣ್ಣನವರ ಹೆಸರಿನಲ್ಲಿ ಹಿಂದು ಸಮಾವೇಶ ಹಮ್ಮಿಕೊಳ್ಳುತ್ತಿರುವುದು ಖಂಡನೀಯವಾಗಿದ್ದು, ಬಸವಕಲ್ಯಾಣದ ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದಾರೆ. ಮಠಾಧೀಶರ ಬಗ್ಗೆ ಅವಾಚ್ಯಶಬ್ದದಿಂದ ನಿಂದಿಸುತ್ತಿದ್ದು, ಮಹಿಳಾ ಚಿಂತಕರನ್ನು ಅವಮಾನಿಸಿದ್ದಾರೆ.
ಇದೇ ಕಾರಣಕ್ಕೆ ಸುಪ್ರೀಂಕೋರ್ಟ್ ಕನ್ನೇರಿ ಶ್ರೀಗಳಿಗೆ ಮಠದಲ್ಲಿ ಪೂಜೆ, ಧ್ಯಾನ ಮಾಡಿಕೊಂಡಿರಿ ಎಂದು ಆದೇಶಿಸಿದ್ದರೂ, ವಿವಿಧೆಡೆ
ಸಂಚರಿಸುತ್ತಾ ಬಸವಾಭಿಮಾನಿಗಳ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಮತ್ತು ಸಂವಿಧಾನಕ್ಕೆ ಅಗೌರವ ತೋರಿಸುತ್ತಿರುವ ಶ್ರೀಗಳು ಆಯೋಜಿಸಿರುವ ಸಮಾವೇಶ ನಿಷೇಧಿಸಬೇಕು. ಮಠಾಧೀಶಕರು ಮತ್ತು ಮಹಿಳೆಯರನ್ನು ಅವಮಾನಿಸಿರುವ ಕನ್ನೇರಿ ಶ್ರೀಗಳು ಬಹಿರಂಗ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.
ವಿವಿಧ ಸಂಘಟನೆ ಪದಾಧಿಕಾರಿಗಳಾದ ದಿಲೀಪ್ ಕುಮಾರ ವಂದಾಲ, ಚನ್ನಬಸಮ್ಮ ಕಂಪ್ಲಿ, ಹನುಮಂತಪ್ಪ ಸರಿಗಮ, ಸಿ.ಎಚ್.ನಾರಿನಾಳ್, ವೀರೇಶ ರಡ್ಡಿ, ಎ.ಕೆ.ಮಹೇಶಕುಮಾರ ಇತರರಿದ್ದರು.