ಕನಿಷ್ಠ ವೇತನ ಪಾವತಿಗೆ ಆಗ್ರಹಿಸಿ ಹಾಸ್ಟೆಲ್ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್, ಪದಾಧಿಕಾರಿಗಳಾದ ದಾವಲ್‌ಸಾಬ್, ನೂರ್‌ಪಾಷಾ, ಬಾಳೇಶ, ಮಂಜುನಾಥ, ಪಾರ್ವತಿ, ರುಕ್ಮಿಣಿ ಇತರರಿದ್ದರು. 
ಕೊಪ್ಪಳ

ಕನಿಷ್ಠ ವೇತನಕ್ಕಾಗಿ ಬೆಂಗಳೂರು ಚಲೋ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • 25ರಿಂದ ಫ್ರೀಡ್‌ಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ
ಗಂಗಾವತಿ: ಹೊರಗುತ್ತಿಗೆ ಸಿಬ್ಬಂದಿಗೆ ಕನಿಷ್ಠ ವೇತನ ನಿಗದಿಗೊಳಿಸುವಂತೆ ಒತ್ತಾಯಿಸಿ ಹಾಸ್ಟೆಲ್ ನೌಕರರ ಸಂಘದ ಜಿಲ್ಲಾ ಸಮಿತಿ ಸದಸ್ಯರು ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಸರ್ಕಾರಿ ಹಾಸ್ಟೆಲ್‌ಗಳಲ್ಲಿ 15, 20ವರ್ಷಗಳಿಂದ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರು ಕನಿಷ್ಠ ವೇತನ ಸೇರಿ ಇತರ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಡಿಮೆ ಸಂಬಳಕ್ಕೆ ಹೆಚ್ಚಿನ ಅವಧಿ ಕೆಲಸ ಮಾಡುವಂತಾಗಿದ್ದು, ಉದ್ಯೋಗ ಭದ್ರತೆಯಿಲ್ಲದಂತಾಗಿದೆ. ಸಣ್ಣಪುಟ್ಟ ವಿಚಾರಕ್ಕೆ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುವಂತ ಸ್ಥಿತಿ ಬಂದಿದೆ. ಕನಿಷ್ಠ ಮಾಸಿಕ 36ಸಾವಿರ ರೂ. ವೇತನ ನಿಗದಿ ಜತೆಗೆ ಸೇವಾಭದ್ರತೆ ಒದಗಿಸಬೇಕು. ಎಲ್ಲ ಸಿಬ್ಬಂದಿಗೆ ಗುರುತಿನ ಚೀಟಿ ಸೇರಿ ಎಲ್ಲ ಸೌಲಭ್ಯ ನೀಡಬೇಕು.ಬೇಡಿಕೆ ಈಡೇರಿಕೆಗಾಗಿ ಮೇ 25ರಿಂದ ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಸಿಎಂ, ಸಮಾಜ, ಅಲ್ಪಸಂಖ್ಯಾತ, ಎಸ್ಟಿ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳಾದ ದಾವಲ್‌ಸಾಬ್, ನೂರ್‌ಪಾಷಾ, ಬಾಳೇಶ, ಮಂಜುನಾಥ, ಪಾರ್ವತಿ, ರುಕ್ಮಿಣಿ, ಶಾಂತಮ್ಮ, ರಮೇಶ, ಆನಂದ, ಬಸವರಾಜ, ಗಂಗೇಶ, ಸೋಮು, ನಾಗರಾಜ್, ಜೈನಾಬಿ, ರಾಧಾ, ಶಾರದಾ, ನೀಲಮ್ಮ ಇತರರಿದ್ದರು.