ಎಸ್ಸೆಸ್ಸೆಲ್ಸಿ 2ನೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನೀಡದ ತಾಲೂಕಿನ ಕನಕಗಿರಿ ಕೆಪಿಎಸ್‌ಸಿ ಶಾಲೆ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್‌ಎ್ಐ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ್, ಪದಾಧಿಕಾರಿಗಳಾದ ನಾಗರಾಜ್, ಶರಣಬಸವ, ಕಾರ್ತೀಕ ಇತರರಿದ್ದರು. 
ಕೊಪ್ಪಳ

ಪರೀಕ್ಷೆಗೆ ಅವಕಾಶ ನೀಡದವರ ವಿರುದ್ಧ ಕ್ರಮವಾಗಲಿ

ಗಂಗಾವತಿ: ಎಸ್ಸೆಸ್ಸೆಲ್ಸಿ ಎರಡನೇ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅವಕಾಶ ನೀಡದ ತಾಲೂಕಿನ ಕನಕಗಿರಿ ಕೆಪಿಎಸ್‌ಸಿ ಶಾಲೆ ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಸ್‌ಎ್ಐ ಜಿಲ್ಲಾ ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಎಂ.ಸರಸ್ವತಿ ಜೂಡಿಗೆ ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಕಕ್ಷ ಶಿವಕುಮಾರ ಈಚನಾಳ್ ಮಾತನಾಡಿ, ಕೆಪಿಎಸ್‌ಸಿ ಶಾಲೆಯಲ್ಲಿ ಅನುತ್ತೀರ್ಣನಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶರಣಬಸವ ಹುಲುಗಪ್ಪನಿಗೆ ಎರಡನೇ ಪರೀಕ್ಷೆ ಬರೆಯಲು ಮುಖ್ಯಶಿಕ್ಷಕ ಮತ್ತು ಸಿಬ್ಬಂದಿ ನೋಂದಣಿ ಮಾಡಿಸಿಲ್ಲ. ಸಂಬಂಧಿಸಿದ ದಾಖಲೆಗಳನ್ನು ಸಿಬ್ಬಂದಿಗೆ ನೀಡಿದರೂ, ನಿರ್ಲಕ್ಷ್ಯದಿಂದ ಪರೀಕ್ಷೆಯಿಂದ ವಂಚಿತನಾಗಿದ್ದಾನೆ. ಪರೀಕ್ಷೆಗೆ ನೋಂದಣಿ ಮಾಡದೇ ಅನ್ಯಾಯವಾಗಿದ್ದು, ವಿದ್ಯಾರ್ಥಿ ಭವಿಷ್ಯದ ಮೇಲೆ ಪರಿಣಾಮ ಬೀರಿದೆ. ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ನಾಗರಾಜ್, ಶರಣಬಸವ, ಕಾರ್ತೀಕ, ದುರುಗೇಶ, ಬಸವರಾಜ ಇತರರಿದ್ದರು.