ಗಂಗಾವತಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಬಿಇಒ ಎಚ್.ಬಿ. ನಟೇಶ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ತಾಲೂಕಾಧ್ಯಕ್ಷ ಯು.ನಾಗರಾಜ್ ಇತರರಿದ್ದರು. 
ಕೊಪ್ಪಳ

ವಸೂಲಿ ನಿಲ್ಲಿಸಿ ಪಾಲಕರ ಶೋಷಣೆ ತಪ್ಪಿಸಿ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನಲ್ಲಿ ಹೆಚ್ಚುತ್ತಿರುವ ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಬಿಇಒ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಬಿಇಒ ಎಚ್.ಬಿ.ನಟೇಶ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ ಮಾತನಾಡಿ, ತಾಲೂಕಿನ ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ಹೆಚ್ಚಾಗಿದ್ದು, ಪಾಲಕರನ್ನು ಶೋಷಿಸುತ್ತಿವೆ. ನಿಯಂತ್ರಣಕ್ಕೆ ರೆಗ್ಯುಲೇಟಿಂಗ್ ಪ್ರಾಧಿಕಾರ ರಚಿಸಲು ಸರ್ಕಾರ ಆದೇಶಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಕ್ತಾಯವಾಗಿರುವ ಬಗ್ಗೆ ಹೇಳಿಕೆ ನೀಡುತ್ತಿದ್ದು, ಹೆಚ್ಚು ಡೊನೇಶನ್ ನೀಡುವರಿಗೆ ಪ್ರವೇಶ ನೀಡಲಾಗುತ್ತಿದೆ. ಆರ್‌ಟಿಐ ಯೋಜನೆ ಜಾರಿಯಲ್ಲಿದ್ದರೂ, ಹೆಚ್ಚಿನ ಶುಲ್ಕ ಪಡೆಯುವುದು ನಿಂತಿಲ್ಲ. ಟ್ಯೂಶನ್, ಟ್ಯುಟೋರಿಯಲ್, ಸಿಬಿಎಸ್‌ಇ, ಐಸಿಎಸ್‌ಸಿ ಪಠ್ಯಕ್ರಮ, ಜೆಇಇ, ನೀಟ್ ಸಿಇಟಿ ಹೆಸರಿನಲ್ಲಿ ಪಾಲಕರನ್ನು ಶೋಷಿಸಲಾಗುತ್ತಿದೆ. ವಿದ್ಯಾರ್ಥಿಗಳ ಶುಲ್ಕ ಮತ್ತು ಸೌಲಭ್ಯಗಳ ಬಗ್ಗೆ ಬಹಿರಂಗ ಮಾಹಿತಿ ಲಕ ಹಾಕಬೇಕೆಂಬ ನಿಯಮವಿದ್ದರೂ, ಯಾವೊಂದು ಶಾಲೆ, ಕಾಲೇಜು ಪಾಲಿಸುತ್ತಿಲ್ಲ. ಶಿಕ್ಷಣ ಹಕ್ಕುಗಳನ್ನು ನೀಡದಿದ್ದರೆ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಅನಧಿಕೃತ ಶಾಲೆಗಳಿಗೆ ಕಡಿವಾಣ, ಡೊನೇಶನ್ ನಿಯಂತ್ರಣ, ವಿದ್ಯಾರ್ಥಿ ಸಂಘಟನೆಗಳೊಂದಿಗೆ ಜಂಟಿ ಸಭೆ ಆಯೋಜನೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ತಾಲೂಕಾಧ್ಯಕ್ಷ ಯು.ನಾಗರಾಜ್, ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಾಳಪ್ಪ ಹುಲಿಹೈದರ್ ಬಸಯ್ಯ, ಶರಣಬಸವ ಬಾದ್ನಟ್ಟಿ, ದೊಡ್ಡಬಸವ, ಯಂಕಣ್ಣ, ಅಲ್ತಾಫ್, ಕಾರ್ತಿಕ್ ಇತರರಿದ್ದರು.