ಸಾಮೂಹಿಕ ಶೌಚಗೃಹ ನಿರ್ಮಾಣಕ್ಕೆ ಆಗ್ರಹಿಸಿ ಕನಕಗಿರಿ ತಾಲೂಕಿನ ಹಿರೇಖೇಡ ಮಹಿಳೆಯರು ಗ್ರಾಪಂಗೆ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಲಕ್ಷ್ಮಮ್ಮ, ಶಿಲ್ಪಾ, ಹುಲಿಗೇಮ್ಮ, ರೇಣುಕಮ್ಮ ಇತರರಿದ್ದರು. 
ಕೊಪ್ಪಳ

ಶೌಚಗೃಹಕ್ಕಾಗಿ ನಾರಿಯರ ಹೋರಾಟ

ಕುರುವತ್ತಿ ಶ್ರೀಕಾಂತಪ್ಪ
ಕನಕಗಿರಿ: ಸಾಮೂಹಿಕ ಶೌಚಗೃಹ ಸೌಲಭ್ಯಕ್ಕೆ ಆಗ್ರಹಿಸಿ ತಾಲೂಕಿನ ಹಿರೇಖೇಡ ಗ್ರಾಮದ ಮಹಿಳೆಯರು ಸೋಮವಾರ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮನೆಯಲ್ಲಿ ಶೌಚಗೃಹಗಳಿಲ್ಲ. ಸರ್ವೇ ನಂ.5ರಲ್ಲಿನ ಗಾಂವಠಾಣ ಜಾಗದಲ್ಲಿ ಶೌಚಕ್ಕೆ ಹೋಗುತ್ತಿದ್ದೇವು. ಆದರೆ, ಪಕ್ಕದ ಜಮೀನಿನವರು ಇದು ತಮ್ಮ ಜಮೀನೆಂದು ಮರೆಯಾಗಿದ್ದ ಜಾಲಿಗಿಡಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದ್ದಾರೆ.
ಇದರಿಂದ ಮಹಿಳೆಯರು ಶೌಚಕ್ಕೆ ಹೋಗುವುದು ಕಷ್ಟವಾಗಿದೆ. ಶೌಚಕ್ಕಾಗಿ ರಾತ್ರಿವರೆಗೂ ಕಾದು ಜಮೀನುಗಳಿಗೆ ಹೋಗಬೇಕಿದೆ. ಈ ನಿಟ್ಟಿನಲ್ಲಿ ನಮಗೆ ಸಾಮೂಹಿಕ ಹೈ ಟೆಕ್ ಶೌಚಗೃಹ ನಿರ್ಮಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಲಕ್ಷ್ಮಮ್ಮ, ಶಿಲ್ಪಾ, ಹುಲಿಗೇಮ್ಮ, ರೇಣುಕಮ್ಮ, ಅಂಬಮ್ಮ, ಶರಣಮ್ಮ, ಸತ್ಯಮ್ಮ ಇತರರಿದ್ದರು.