ಗಂಗಾವತಿಯಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಹೋರಾಟದ ರೂಪುರೇಷೆಯ ರಾಜ್ಯ ಮತ್ತು ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೀರಕುಮಾರ ಗಡಾದ್ ಮಾತನಾಡಿದರು. ಉಪಾಧ್ಯಕ್ಷ ಚನ್ನಬಸಯ್ಯ, ಪದಾಧಿಕಾರಿಗಳಾದ ಅನಿಲ್ ಇನಾಂದಾರ್, ಶಾಂತಿನಾಥ ಪಾಟೀಲ್ ಇತರರಿದ್ದರು. 
ಕೊಪ್ಪಳ

ದೆಹಲಿಯಲ್ಲಿ ಮಾ.9ರಿಂದ ಪ್ರತಿಭಟನೆ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ನಿವೃತ್ತ ಕಾರ್ಮಿಕರ ಹಕ್ಕುಗಳಿಗಾಗಿ ಸಂಘಟಿತ ಹೋರಾಟದ ಅಗತ್ಯವಿದ್ದು, ಬೇಡಿಕೆಗಳ ಈಡೇರಿಕೆಗಾಗಿ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ರಾಷ್ಟ್ರೀಯ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ವೀರಕುಮಾರ ಗಡಾದ್ ಹೇಳಿದರು.
ತಾಲೂಕಿನ ಮರಳಿಯ ಶ್ರೀ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ರಾಷ್ಟ್ರೀಯ ಸಂಘರ್ಷ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಹೋರಾಟದ ರೂಪುರೇಷೆಯ ರಾಜ್ಯ ಮತ್ತು ಜಿಲ್ಲಾಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಇಪಿಎಸ್ 95 ಕಾರ್ಮಿಕರಿಗೆ ಬರಬೇಕಾದ ಸೌಲಭ್ಯ ಮತ್ತು ಹಕ್ಕುಗಳು ದೊರೆತಿಲ್ಲ. ಕನಿಷ್ಠ 7500ರೂ. ಪಿಂಚಣಿ ಯೋಜನೆ ಮರೀಚಿಕೆಯಾಗಿದ್ದು, ತುಟ್ಟಿ ಭತ್ಯೆ, ವೈದ್ಯಕೀಯ ಉಚಿತ ಸೌಲಭ್ಯ ಸಿಕ್ಕಿಲ್ಲ. ಹಕ್ಕುಗಳಿಗಾಗಿ ಈಗಾಗಲೇ ಎನ್‌ಎಸಿ ಪದಾಧಿಕಾರಿಗಳು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ದೆಹಲಿಯ ಜಂತರ್ ಮಂತರ್‌ನಲ್ಲಿ ಮಾ.9ರಿಂದ 11ರವರೆಗೆ ಬೃಹತ್ ಸಭೆ ಹಮ್ಮಿಕೊಳ್ಳಲಾಗಿದೆ ಎಂದರು.
ಯೋಜನೆ ವಂಚಿತ ಕಾರ್ಮಿಕರಿಗೆ 5ಸಾವಿರ ರೂ. ಪಿಂಚಣಿ, ಮೃತ ಕಾರ್ಮಿಕ ಪತ್ನಿಗೆ ಶೇ.100 ಪಿಂಚಣಿ ಸೇರಿ ಇತರ ಸೌಲಭ್ಯ ಮತ್ತು ಹೋರಾಟ ಕುರಿತು ಚರ್ಚಿಸಲಾಯಿತು.
ಸಂಘಟನೆ ಉದ್ದೇಶ ಮತ್ತು ಹೋರಾಟದ ಬಗ್ಗೆ ಸಮಿತಿ ರಾಜ್ಯ ಉಪಾಧ್ಯಕ್ಷ ಚನ್ನಬಸಯ್ಯ ಮಾತನಾಡಿದರು. ಪದಾಧಿಕಾರಿಗಳಾದ ಅನಿಲ್ ಇನಾಂದಾರ್, ಶಾಂತಿನಾಥ ಪಾಟೀಲ್, ಗುಂಡಪ್ಪ ತೊಂತನಾಳ್, ಎಸ್.ಎಸ್.ಅಳಗುಂಡಿ, ಮಹ್ಮದ್ ಶಾಮೀದ್, ಮೌನೇಶ ಪತ್ತಾರ್, ಕಾರ್ಮಿಕ ಮುಖಂಡರಾದ ರಮೇಶ ಕುಲ್ಕರ್ಣಿ, ಅಲಮೇಲಯ್ಯ, ಮೌನಪ್ಪ, ವೀರಯ್ಯ, ಎಂ.ಬಸಪ್ಪ, ಸಕ್ಕರಗೌಡ, ಸುಬಾನಿ, ಶಿವರಾಜ, ಎಂ.ಹೊನ್ನಪ್ಪ, ಉಮಲೂಟಿ ಬಸಪ್ಪ, ಹೊನ್ನೂರಸಾಬ್, ಕನಕರೆಡ್ಡಿ, ಸುಬ್ರಮಣ್ಯ, ಕೊಟ್ರಪ್ಪ ಸೇರಿ ಗಂಗಾವತಿ ಶುಗರ್ಸ್‌, ಕೆಕೆಆರ್‌ಟಿಸಿ, ಎಲ್‌ಐಸಿ ನಿವೃತ್ತ ಕಾರ್ಮಿಕರಿದ್ದರು.