ತಾಲೂಕಿನ ಇರಕಲ್ಲಗಡ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡವೂ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಇರಕಲ್ಲಗಡ ಗ್ರಾಂಪಂ ಪಿಡಿಓ ಪರಮೇಶ್ವರಯ್ಯ ಉದ್ಘಾಟಿಸಿದರು. ನಾಡಕಛೇರಿ ಉಪತಹಶೀಲ್ದಾರ ಮೈನುದ್ದೀನ್​ ನಾಗನೂರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಪ್ರತಿಭಾ, ವಲಯ ಮೇಲ್ವಿಚಾರಕಿ ಮಂಜುಳ, ವೀರಬಸಪ್ಪ ಪಟ್ಟಣಶೆಟ್ರು, ಶರಣಪ್ಪ ಸಿಂಗನಾಳ ಇದ್ದರು. 
ಕೊಪ್ಪಳ

ಹೆಣ್ಣು ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ

ಪ್ರಮುಖ ಮುಖ್ಯಾಂಶಗಳು

  • ಶಿವಶರಣಪ್ಪ ಗದ್ದಿ ಸೂಚನೆ
  • ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಷರಣೆ
ಕೊಪ್ಪಳ : ಹೆಣ್ಣು ಮಕ್ಕಳ ಭ್ರೂಣ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಮತ್ತು ಅವರಿಗೆ ಉತ್ತಮ ಶಿಕ್ಷಣ ನೀಡಲು ಸಮಾಜ ಆದ್ಯತೆ ನೀಡಬೇಕು. ಹೆಣ್ಣು ಮಕ್ಕಳ ರಕ್ಷಣೆ ಕೇವಲ ಸರ್ಕಾರದ ಕೆಲಸವಲ್ಲ, ಅದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಗದ್ದಿ ಅವರು ತಿಳಿಸಿದರು.
ತಾಲೂಕಿನ ಇರಕಲ್ಲಗಡ ಗ್ರಾಮ ಪಂಚಾಯತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೇಟಿ ಬಚಾವೋ ಬೇಟಿ ಪಡವೂ ಹಾಗೂ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಮೂಹಿಕ ಅಥವಾ ಸರಳ ಮದುವೆ ಆಯೋಜಿಸುವವರು ಕಡ್ಡಾಯವಾಗಿ ವಧು-ವರರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಿ, ಇಲಾಖೆಯಿಂದ ಅನುಮತಿ ಪಡೆಯಬೇಕು. ಮದುವೆ ಆಯೋಜಕರು ಮತ್ತು ಧಾರ್ಮಿಕ ಮುಖಂಡರು ಬಾಲ್ಯ ವಿವಾಹ ನಡೆಯದಂತೆ ಎಚ್ಚರಿಕೆ ವಹಿಸಬೇಕು. ತಪ್ಪಿದಲ್ಲಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಮಾಜ ಕಾರ್ಯಕರ್ತೆ ಪ್ರತಿಭಾ ಅವರು ಪೋಸ್ಕೋ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿ, ಮಕ್ಕಳ ಸಹಾಯವಾಣಿ 1098 ಹಾಗೂ ತುರ್ತು ಸೇವೆಗಾಗಿ 112 ಸಂಖ್ಯೆ ಬಳಸುವಂತೆ ಸಾರ್ವಜನಿಕರಿಗೆ ತಿಳಿಸಿದರು.
ನಾಡಕಛೇರಿ ಉಪತಹಶೀಲ್ದಾರ ಮೈನುದ್ದೀನ್​ ನಾಗನೂರು, ಇರಕಲ್ಲಗಡ ಗ್ರಾಂಪಂ ಪಿಡಿಓ ಪರಮೇಶ್ವರಯ್ಯ, ವಲಯ ಮೇಲ್ವಿಚಾರಕಿ ಮಂಜುಳ, ವೀರಬಸಪ್ಪ ಪಟ್ಟಣಶೆಟ್ರು, ಶರಣಪ್ಪ ಸಿಂಗನಾಳ, ಇತರರಿದ್ದರು.