ಕೊಪ್ಪಳದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಸರ್ಕಾರಕ್ಕೆ ತಾಳೆಗರಿ ಹಸ್ತಪ್ರತಿ ಹಸ್ತಾಂತರಿಸಲಾಯಿತು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಮಾಜಿ ಸಂಸದ ಸಂಗಣ್ಣ ಕರಡಿ, ಪುರಾತತ್ವ ಇಲಾಖೆ ಉಪನಿರ್ದೇಶಕ ಡಾ.ಆರ್​.ಶೆಜೇಶ್ವರ ಇದ್ದರು.  
ಕೊಪ್ಪಳ

ಪೂರ್ವಜರ ಜ್ಞಾನ ರಕ್ಷಣೆ ಅನನ್ಯ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಅನಿಸಿಕೆ
  • ಪ್ರಾಚಿನ ತಾಳೆಗರಿ ಹಸ್ತಾಂತರ
ಕೊಪ್ಪಳ : ನಮ್ಮ ಪೂರ್ವಜರು ತಮ್ಮ ಜ್ಞಾನವನ್ನು ತಾಳೆಗರಿಗಳ ಮೆಲೆ ದಾಖಲಿಸುತ್ತಿದದರು. ಇಂದಿನ ಪೀಳಿಗೆಗೆ ಆ ಜ್ಞಾನ ವರವಾಗಲಿದೆ. ಅಂಥ ತಾಳೆಗರಿಗಳ ರಕ್ಷಣೆ ಕಾರ್ಯ ಅನನ್ಯ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅಭಿಪ್ರಾಯಪಟ್ಟರು.
ನಗರದ ಅಗಸ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ತಾಳೆಗರಿ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶ ಐತಿಹಾಸಿಕವಾಗಿ, ಸಾಂಸತಿಕವಾಗಿ ಶ್ರೀಮಂತ. ಆ ಗತ ವೈಭವದ ಮಾಹಿತಿ ಇಂಥ ತಾಳೆಗರಿಗಳಲ್ಲಿದೆ. ಸಂಸತ, ಕನ್ನಡ, ತೆಲುಗು ಹೀಗೆ ಅನೇಕ ಭಾಷೆಗಳಲ್ಲಿನ ತಾಳೆಗರಿ ಲಭ್ಯವಾಗಿವೆ. ಅವು ಕೇವಲ ಎಲೆಗಳಲ್ಲ. ನಮ್ಮ ಸಂಸತಿ, ಕಲೆ, ಸಾಹಿತ್ಯ, ವಿಜ್ಞಾನ ಹೀಗೆ ಎಲ್ಲದರ ಮಾಹಿತಿ ಭಂಡಾರ. ಅವುಗಳ ಮೂಲಕ ನಮ್ಮ ಇತಿಹಾಸ ಅನಾವರಣಗೊಳ್ಳುತ್ತಿದೆ. ನಶಿಸುತ್ತಿರುವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಬೇಕಿದೆ. ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಹಾಗೂ ಸಂಶೋಧಕರ ಬಳಕೆಗೆ ಮುಕ್ತಗೊಳಿಸುವ ಅವಶ್ಯವಿದೆ. ಸಾರ್ವಜನಿಕರ ಬಳಿ ಅಥವಾ ಖಾಸಗಿ ಸಂಗ್ರಹಗಳಲ್ಲಿ ಅಮೂಲ್ಯ ತಾಳೆಗರಿ ಅಥವಾ ಪ್ರಾಚಿನ ದಾಖಲೆಗಳಿದ್ದರೆ ಸಲ್ಲಿಸುವಂತೆ ಮನವಿ ಮಾಡಿದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ತಾಳೆಗರಿ ಕೇವಲ ಎಲೆಗಳಲ್ಲ. ನಮ್ಮ ಇತಿಹಾಸ, ವಿಜ್ಞಾನ, ಆಯುರ್ವೇದ, ಜ್ಯೋತಿಷ್ಯ, ಸಾಹಿತ್ಯದ ಅಪಾರ ಜ್ಞಾನ ಅಡಗಿದೆ. ಅವುಗಳ ರಕ್ಷಣೆಗೆ ಮುಂದಾಗಿರುವುದು ಉತ್ತಮ ಕೆಲಸ. ಅವುಗಳ ಡಿಜಿಟಲೀಕರಣ ಅವಶ್ಯ. ಸಂಶೋಧಕರು, ವಿದ್ಯಾರ್ಥಿಗಳಿಗೆ ನೆರವಾಗಲಿದೆ. ಯಾರ ಬಳಿಯಾದರು ಹಸ್ತಪ್ರತಿಗಳಿದ್ದಲ್ಲಿ ನೀಡುವಂತೆ ತಿಳಿಸಿದರು.
ಪುರಾತತ್ವ ಇಲಾಖೆ ಉಪನಿರ್ದೇಶಕ ಡಾ.ಆರ್​.ಶೆಜೇಶ್ವರ ಮಾತನಾಡಿ, ನಾಡಿನ ಇತಿಹಾಸ, ಸಂಸತಿ, ಪರಂಪರೆ ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಪುರಾತತ್ವ ಸಂಶೋಧನೆಗಳು ಪ್ರಮುಖ ಪಾತ್ರವಹಿಸುತ್ತಿವೆ. ಇತಿಹಾಸ ಕೇವಲ ರಾಜರಿಗೆ ಸೀಮಿತವಲ್ಲ. ಸಾಮಾನ್ಯರ ಕೊಡುಗೆಗಳೂ ಇವೆ. ಮಾಹಿತಿ ದಾಖಲೆಗಳನ್ನು ನಾವೆಲ್ಲ ರಸಬೇಕು ಎಂದರು.
ಅಗಸ ಆಯುರ್ವೇದ ಮಹಾವಿದ್ಯಾಲಯ ಮುಖ್ಯಸ್ಥ ಡಾ.ಸಂಗಮೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಡಾ.ಚಲಪತಿ, ಡಾ.ಲೋಕೇಶ ಟೇಕಲ್​, ಡಾ.ಮಹಾಂತಗೌಡ ಬಿರಾದಾರ, ಡಾ.ಸಿದ್ದಲಿಂಗಪ್ಪ ಕೊಟ್ನೇಕಲ್​, ಶಿವನಗೌಡ ಪೊ.ಪಾ., ಡಾ.ಪ್ರಜ್ವಲ್​, ಶ್ರೀದೇವಿ ಇತರರಿದ್ದರು.