ಬೆಂಗಳೂರಿನ ಅನ್ಸಾರಿ ನಿವಾಸದಲ್ಲಿ ಮಂಗಳವಾರ ಆಯೋಜಿಸಿದ್ದ ಗಂಗಾವತಿ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾತನಾಡಿದರು. ನಗರಸಭೆ ಮಾಜಿ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ, ಪ್ರಮುಖರಾದ ಹುಸೇನಪ್ಪ ಹಂಚಿನಾಳ್, ಎ್.ರಾಘವೇಂದ್ರ, ಬಳ್ಳಾರಿ ರಾಮಣ್ಣನಾಯಕ ಇತರರಿದ್ದರು. 
ಕೊಪ್ಪಳ

ಪಕ್ಷ ಸಂಘಟಿಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆ
  • ಬೆಂಗಳೂರಿನ ನಿವಾಸದಲ್ಲಿ ಕಾರ್ಯಕರ್ತರ ಸಭೆ
ಗಂಗಾವತಿ: ಕಾಂಗ್ರೆಸ್‌ನಲ್ಲಿ ಮುಂದುವರಿಯುತ್ತಿದ್ದು, ಪಕ್ಷ ಸಂಘಟನೆ ಮತ್ತು ಕೆ ್ಷೀತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ಕೆಲ ವರ್ಷಗಳಿಂದ ಕ್ಷೇತ್ರದಿಂದ ದೂರ ಉಳಿದಿದ್ದ ಅನ್ಸಾರಿಯನ್ನು ಕರೆತರಲು ಬೆಂಗಳೂರಿಗೆ ತೆರಳಿದ್ದ ಸ್ಥಳೀಯ ಕಾರ್ಯಕರ್ತರ ನಿಯೋಗಕ್ಕೆ ಮಂಗಳವಾರ ಭರವಸೆ ನೀಡಿದ್ದಾರೆ. ಪಕ್ಷ ಬಿಡುವ ಯಾವುದೇ ಚಿಂತನೆಯಿಲ್ಲ, ಜೆಡಿಎಸ್ ಸೇರಲ್ಲ. ಕಾಂಗ್ರೆಸ್ ಪಕ್ಷವನ್ನು ಕ್ಷೇತ್ರದಲ್ಲಿ ಸಂಘಟಿಸಲಾಗುತ್ತಿದ್ದು, ಕ್ಷೇತ್ರಕ್ಕೆ ಶೀಘ್ರ ಅಗಮಿಸಿ ಕಾರ್ಯಕರ್ತರೊಂದಿಗೆ ಸಭೆ ಆಯೋಜಿಸಲಾಗುವುದು.
ಮಾಜಿ ಸಿಎಂ ಸಿದ್ದರಾಮಯ್ಯ ನಾಯಕತ್ವದಲ್ಲಿ ಪಕ್ಷ ಗಟ್ಟಿಯಾಗಿದ್ದು, ಹಾಲಿ ಸಿಎಂ ಡಿ.ಕೆ.ಶಿವಕುಮಾರ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಕ್ಷೇತ್ರಕ್ಕೆ ಬರುವುದು ಶತಸಿದ್ಧವಾಗಿದ್ದು, ಕಾರ್ಯಕರ್ತರು ಅಧೈರ್ಯಗೆಡುವ ಅಗತ್ಯವಿಲ್ಲ ಎಂದರು.
50ಕ್ಕೂ ಹೆಚ್ಚು ವಾಹನಗಳಲ್ಲಿ ಬೆಂಗಳೂರಿಗೆ ತೆರಳಿದ್ದ ಕಾರ್ಯಕರ್ತರ ನಿಯೋಗದೊಂದಿಗೆ ಅನ್ಸಾರಿ ಕೆಲ ಸಮಯ ಕಳೆದಿದ್ದು, ಕ್ಷೇತ್ರದ ವಾಸ್ತವದ ಮಾಹಿತಿ ಪಡೆದರು. ನಿಯೋಗ ಕ್ಷೇತ್ರಕ್ಕೆ ಬರುವಂತೆ ಅಧಿಕೃತ ಲಿಖಿತ ಪತ್ರ ನೀಡಿತು. ನಗರಸಭೆ ಮಾಜಿ ವಿಪಕ್ಷ ನಾಯಕ ಮನೋಹರಸ್ವಾಮಿ ಹಿರೇಮಠ ಮಾತನಾಡಿ, ಕ್ಷೇತ್ರಕ್ಕೆ ಬರುವ ಮತ್ತು ಪಕ್ಷ ಸಂಘಟಿಸುವ ಭರವಸೆ ನೀಡಿದ್ದು, ಶೀಘ್ರ ಕಾರ್ಯಕರ್ತರ ಸಭೆ ಆಯೋಜಿಸಲಿದ್ದಾರೆ ಎಂದರು. ವಿಧಾನಸಭೆ ಚುನಾವಣೆ-2023 ನಂತರ ಕ್ಷೇತ್ರ ಬಿಟ್ಟಿದ್ದ ಅನ್ಸಾರಿ, ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದರು. ವಿಪಕ್ಷವೇ ಇಲ್ಲದ ವಾತಾವರಣ ನಿರ್ಮಾಣವಾಗಿದ್ದರಿಂದ ಅನ್ಸಾರಿ ಬೆಂಬಲಿತ ಕಾರ್ಯಕರ್ತರು ಅತಂತ್ರರಾಗಿದ್ದು, ರಾಜಕೀಯ ಮುನ್ನೆಲೆಗೆ ಬರುವ ನಿಟ್ಟಿನಲ್ಲಿ ಬೆಂಗಳೂರಿಗೆ ತೆರಳಿ ಕ್ಷೇತ್ರಕ್ಕೆ ಬರುವಂತೆ ಒತ್ತಾಯಿಸಿದರು.
ಪ್ರಮುಖರಾದ ಹುಸೇನಪ್ಪ ಹಂಚಿನಾಳ್, ಎ್.ರಾಘವೇಂದ್ರ, ಬಳ್ಳಾರಿ ರಾಮಣ್ಣನಾಯಕ, ಇಲಿಯಾಸ್‌ಬಾಬಾ, ಪುಷ್ಪಾಂಜಲಿ ಗುನ್ನಾಳ್, ಸನ್ನೀಕ್, ಪರಶುರಾಂ ಕಿರಿಕಿರಿ ಇತರರಿದ್ದರು.