ಕೊಪ್ಪಳದಲ್ಲಿ ಗುರುವಾರ ಗ್ಯಾರಂಟಿ ಯೋಜನಗೆಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಎಸ್​.ಬಿ.ಖಾದ್ರಿ, ಜಿಪಂ ಸಿಇಒ ವರ್ಣಿತ್​ ನೇಗಿ ಇದ್ದರು. 
ಕೊಪ್ಪಳ

ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಪಡಿತರ ಅಕ್ಕಿ ಅಕ್ರಮಕ್ಕೆ ಹಾಕಿ ಕಡಿವಾಣ
  • ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್​ ಸೂಚನೆ
ಕೊಪ್ಪಳ: ಅನ್ನಭಾಗ್ಯ ಪಡಿತರ ಅಕ್ಕಿ ಕಳ್ಳ ಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ್​ ಸೂಚಿಸಿದರು.
ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು.
ಪಡಿತರ ಮಾರಾಟಕ್ಕೆ ಅವಕಾಶವಿಲ್ಲ. ಅಕ್ರಮ ದಾಸ್ತಾನು, ಮಾರಾಟ ಮಾಡುತ್ತಿರುವುದು ಹೆಚ್ಚುತ್ತಿದೆ. ತಪ್ಪಿತಸ್ಥರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಿ. ಜನರಿಗೂ ಅರಿವು ಮೂಡಿಸಿ. ನ್ಯಾಯಬೆಲೆ ಅಂಗಡಿಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಿ. ಪಡಿತರ ವಿತರಣೆಗೂ ಮುನ್ನ ಗುಣಮಟ್ಟ ಪರಿಶೀಲಿಸಿ. ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ತಿಳಿಸಿದರು.
ಗೃಹಲಕ್ಷಿ$್ಮಗೆ ಸಂಬಂಧಿಸಿದಂತೆ ಸಿಡಿಪಿಒಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲವೆಂಬ ಬಗ್ಗೆ ದೂರುಗಳಿವೆ. ತಕ್ಷಣ ಸರಿಪಡಿಸಿಕೊಳ್ಳಿ. ಮರಣ ಹೊಂದಿದವರಿಗೆ ಹಣ ಪಾವತಿಯಾಗುತ್ತಿದ್ದಲ್ಲಿ ನಿಲ್ಲಿಸಿ. ಗೃಹಜ್ಯೋತಿ ಅನುಷ್ಠಾನದಲ್ಲಿ ಇರುವ ತಾಂತ್ರಿಕ ತೊಂದರೆ ನಿವಾರಿಸಿ. ಕೌಶಲ ತರಬೇತಿಗೆ ಯುವನಿಧಿ ಲಾನುಭವಿಗಳನ್ನು ನೋಂದಾಯಿಸಿ. ಬಡವರು, ಅರ್ಹರಿಗೆ ಗ್ಯಾರಂಟಿ ಯೋಜನೆ ತಲುಪಿಸಿ. ಗ್ರಾಪಂ ಮಟ್ಟದಲ್ಲಿ ಪ್ರಗತಿ ಪರಿಶೀಲನೆ ನಡೆಸಿ. ಮೇ 16, 17ರಂದು ಜರುಗುವ ಕನಕಗಿರಿ ಉತ್ಸವದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಚಾರ ಮಳಿಗೆ ಹಾಕುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.
ಜಿಪಂ ಸಿಇಒ ವರ್ಣಿತ್​ ನೇಗಿ ಮಾತನಾಡಿ, ಗೃಹಲಕ್ಷಿ$್ಮ ಯೋಜನೆಗಿರುವ ಮಾನದಂಡ ತಿಳಿಸಿ. ಮರಣ ಹೊಂದಿದವರ ವಿವರ ತಿಳಿಸಿ. ಗ್ರಾಮಸಭೆಯಲ್ಲಿಯೇ ಗ್ರಾಮ ಮಟ್ಟದ ಪ್ರಗತಿ ಪರಿಶೀಲನೆ ನಡೆಸುವಂತೆ ತಾಪಂ ಇಒಗಳಿಗೆ ನಿರ್ದೇಶಿಸಿದರು. ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷರಾದ ಎಸ್​.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ ಮಾತನಾಡಿದರು.

ವರದಿ ಒಪ್ಪಿಸಿದ ಅಧಿಕಾರಿಗಳು

ಗೃಹಲಕ್ಷಿ$್ಮಯಡಿ 3,21,019 ಫಲಾನುಭವಿಗಳಿಗೆ ೆಬ್ರವರಿವರೆಗೆ ಹಣ ಸಂದಾಯವಾಗಿದೆ. ಗೃಹಜ್ಯೋತಿಯಡಿ ಮಾರ್ಚ್​ ಅಂತ್ಯಕ್ಕೆ 2,89,212 ಗ್ರಾಹಕರಿಗೆ ಸೌಲಭ್ಯ ದೊರೆತಿದೆ. 3,63,521 ಪಡಿತರ ಕಾರ್ಡ್​ಗಳಿದ್ದು, ಏಪ್ರೀಲ್​ವರೆಗೆ 12,393 ಮೆ.ಟನ್​ ಪಡಿತರ ಹಂಚಿಕೆ ಮಾಡಲಾಗಿದೆ. ಶಕ್ತಿ ಯೋಜನೆಯಡಿ ಮಾರ್ಚ್​-ವರೆಗೆ 34,84,433 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಯುವನಿಧಿಯಡಿ ಜನೆವರಿವರೆಗೆ 14,266 ಫಲಾನುಭವಿಗಳು ನೋಂದಣಿಯಾಗಿದ್ದು, 30.32 ಕೋಟಿ ರೂ.ಪಾವತಿಯಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.