ಮುನಿರಾಬಾದ್ ಸಮೀಪದ ಇಂದರಿಗಿಯಲ್ಲಿ ಶಾಖಾ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಸದ ರಾಜಶೇಖರ್ ಹಿಟ್ನಾಳ ಭೂಮಿಪೂಜೆ ನೆರವೇರಿಸಿದರು. ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ಕಿರ್ಲೋಸ್ಕರ್ ಕಂಪನಿಯ ಉದಯ ಕುಲಕರ್ಣಿ ಇತರರಿದ್ದರು. 
ಕೊಪ್ಪಳ

ಗ್ರಾಮಾಭಿವೃದ್ಧಿಗೆ ಖಾಸಗಿ ಸಹಭಾಗಿತ್ವ ಅಗತ್ಯ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಂಸದ ರಾಜಶೇಖರ್ ಹಿಟ್ನಾಳ ಹೇಳಿಕೆ
  • ಭೂಮಿಪೂಜೆ
ಮುನಿರಾಬಾದ್: ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು. ಸಮೀಪದ ಇಂದರಿಗಿ ಗ್ರಾಮದ ಶಾಖಾ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕಿರ್ಲೋಸ್ಕರ್ ಕಂಪನಿ ಸಿಎಸ್‌ಆರ್ ನಿಧಿಯನ್ನು ಗ್ರಾಮೀಣ ಭಾಗದ ಅಭಿವೃದ್ಧಿಗೆ ವಿನಿಯೋಗಿಸುತ್ತಿರುವುದು ಶ್ಲಾಘನೀಯ ಎಂದರು. ಜಿಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಕರಡಿ, ಕಿರ್ಲೋಸ್ಕರ್ ಕಂಪನಿಯ ಉದಯ ಕುಲಕರ್ಣಿ, ಸಿಬ್ಬಂದಿ ಇದ್ದರು.