ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಋಷ್ಯಮುಖ ಪರ್ವತದ ಆವರಣದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಸ್ವಚ್ಛತಾಂದೋಲನ ಮತ್ತು ಪರಿಸರ ರಕ್ಷಣೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಅಕ್ಕನಾಗಮ್ಮ, ಪ್ರಾಧ್ಯಾಪಕರಾದ ಚೈತ್ರಾ, ಜಯಶ್ರೀ, ಆಶಾಲತಾ, ಪರಿಷತ್ ನಗರ ಕಾರ್ಯದರ್ಶಿ ಕಿರಣ್ ವಸದ್ ಇತರರಿದ್ದರು.
- ಪರಿಸರ ರಕ್ಷಣೆ
- ಹಸಿರೀಕರಣ
- ಜಾಗೃತಿ
ಪರಿಸರ ಸ್ವಚ್ಛತೆ, ಹಸಿರೀಕರಣಕ್ಕೆ ಆದ್ಯತೆ ನೀಡಿ
ಗಂಗಾವತಿ: ತಾಲೂಕಿನ ಹನುಮನಹಳ್ಳಿ ಬಳಿ ಐತಿಹಾಸಿಕ ಪ್ರಸಿದ್ಧ ಋಷ್ಯಮುಖ ಪರ್ವತದ ಆವರಣದಲ್ಲಿ ಮಂಗಳವಾರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಎನ್ನೆಸ್ಸೆಸ್ ಘಟಕದಿಂದ ಸ್ವಚ್ಛತಾಂದೋಲನ ಹಮ್ಮಿಕೊಳ್ಳಲಾಗಿತ್ತು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ, ಸ್ಟೂಡೆಂಟ್ಸ್ ಾರ್ ಡೆವಲಪ್‌ಮೆಂಟ್ ಮತ್ತು ಹಕ್ಕಬುಕ್ಕ ಬ್ರಿಗೇಡ್ ಸಹಯೋಗದ ಅಂದೋಲನದಲ್ಲಿ ಬೆಟ್ಟ ಮತ್ತು ಸ್ಮಾರಕಗಳ ಸುತ್ತಲೂ ಸ್ವಚ್ಛಗೊಳಿಸಲಾಯಿತು.
ಸಸಿಗಳನ್ನು ನೆಟ್ಟು ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪರಿಷತ್ ನಗರ ಕಾರ್ಯದರ್ಶಿ ಕಿರಣ್ ವಸದ್ ಮಾತನಾಡಿ, ಪರಿಸರ ಸ್ವಚ್ಛತೆ ಜತೆಗೆ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಸ್ಮಾರಕಗಳ ರಕ್ಷಣೆ ಎಲ್ಲರ ಹೊಣೆ ಎಂದರು.
ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಅಕ್ಕನಾಗಮ್ಮ, ಪ್ರಾಧ್ಯಾಪಕರಾದ ಚೈತ್ರಾ, ಜಯಶ್ರೀ, ಪೂಜಾ, ಗಾಯತ್ರಿ, ಆಶಾಲತಾ, ಪರಿಷತ್ ಸದಸ್ಯರಾದ ಜೆ.ಎಸ್.ಗಣೇಶ, ವಿನಯ್ ರೆಡ್ಡಿ, ಸುಪ್ರೀತ್, ಗೌತಮ್, ಕಾರ್ತಿಕ್, ಹಕ್ಕಬುಕ್ಕ ಬ್ರಿಗೇಡ್‌ನ ವೀರೇಶ ಅಂಜನಾದ್ರಿ, ಮುತ್ತು ನಾಯಕ್ ಇತರರಿದ್ದರು.