ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪಿಐ ಪ್ರಕಾಶ ಆರ್. ಯಾತನೂರ್‌ಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ, ಪದಾಧಿಕಾರಿಗಳಾದ ನಿಸಾರ, ಅಂಜಿನಿ ಗೊರೂರು, ಪ್ರವೀಣಕುಮಾರ, ಶಬ್ಬಿರ್ ಪಾಷಾ, ಹೇಮಂತಕುಮಾರ ಹೊಸ್ಕೇರಾ, ಅಜಯಕುಮಾರ, ಬಸಣ್ಣ ಕಲ್ಗುಡಿ ಇತರರಿದ್ದರು. 
ಕೊಪ್ಪಳ

ಮದ್ಯದ ಅಕ್ರಮ ಮಾರಾಟ ತಡೆಯಿರಿ

ಪ್ರಮುಖ ಮುಖ್ಯಾಂಶಗಳು

  • ಕರವೇ
  • ಪದಾಧಿಕಾರಿ
  • ಮನವಿ
ಗಂಗಾವತಿ: ಅಬಕಾರಿ ನಿಯಮ ಉಲ್ಲಂಸುವ ಸಿಎಲ್-2 ಸನ್ನದ್ದುದಾರರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ನಗರ ಠಾಣೆ ಪಿಐ ಪ್ರಕಾಶ ಆರ್. ಯಾತನೂರ್‌ಗೆ ಶನಿವಾರ ಮನವಿ ಸಲ್ಲಿಸಿದರು.
ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರೊಂದಿಗೆ ಪಿಐರನ್ನು ಭೇಟಿಯಾದ ಪದಾಧಿಕಾರಿಗಳು, ಸಿಎಲ್-2 ಸನ್ನದ್ದುದಾರರ ನಿಯಮ ಉಲ್ಲಂಘನೆ ಮತ್ತು ಸರ್ಕಾರಕ್ಕೆ ಶುಲ್ಕ ವಂಚಿಸುತ್ತಿರುವ ಬಗ್ಗೆ ಚರ್ಚಿಸಿದರು.
ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಗಿಣಿಮೋತಿ ಮಾತನಾಡಿ, ಸಿಎಲ್-2 ಸನ್ನದ್ದುದಾರರು ಅಬಕಾರಿ ನಿಯಮ ಉಲ್ಲಂಸುತ್ತಿದ್ದು, ದರಪಟ್ಟಿಯನ್ನು ಹಾಕುತ್ತಿಲ್ಲ. ಮಾರಾಟದ ವ್ಯವಸ್ಥೆ ಮಾತ್ರ ಮಾಡಬೇಕಾಗಿದ್ದರೂ, ಒಳಗಡೆ ಕುಡಿಯಲು ಅವಕಾಶ ನೀಡುತ್ತಿರುವುದು ಕಾನೂನು ಬಾಹಿರವಾಗಿದೆ. ಅದರಂತೆ ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು, ಮದ್ಯದ ಅಕ್ರಮ ಮಾರಾಟ ಮಿತಿ ಮೀರಿದೆ.
ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯದ ಪ್ಯಾಕೇಟ್‌ಗಳು ದೊರೆಯುತ್ತಿವೆ. ಇದರಿಂದ ಕುಡುಕರ ಹಾವಳಿ ಹೆಚ್ಚುತ್ತಿದ್ದು,ಅನಾವಶ್ಯಕ ಗಲಾಟೆಗಳಿಗೆ ಅವಕಾಶ ನೀಡಿದಂತಾಗಿದೆ. ಅಬಕಾರಿ ಅಧಿಕಾರಿಗಳು ಪರಿಶೀಲಿಸಿ, ಮದ್ಯದ ಅಕ್ರಮ ಮಾರಾಟ ನಿಯಂತ್ರಿಸುವಂತೆ ಒತ್ತಾಯಿಸಿದರು.