ತಾಲೂಕಿನ ಹೊರ್ತಟ್ನಾಳ ಸರ್ಕಾರಿ ಪ್ರೌಢಶಾಲೆ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 150 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಎಸ್​ಡಿಎಂಸಿ ಅಧ್ಯಕ್ಷ ಹನುಮಪ್ಪ ಕುಟುಗುನಳ್ಳಿ ಉದ್ಘಾಟಿಸಿದರು. ಜಿಲ್ಲಾ ಉಪ ಅರಣ್ಯ ಅಧಿಕಾರಿ ಹುಸೇನ್​ ಬಾಷಾ, ವಲಯ ಅರಣ್ಯ ಅಧಿಕಾರಿ ಗುರುನಗೌಡ ಪಾಟೀಲ್​, ಮುಖ್ಯ ಶಿಕ್ಷಕ ಬಸನಗೌಡ ಮರೆಗಡ್​ ಇದ್ದರು. 
ಕೊಪ್ಪಳ

ಪರಿಸರ ಬೆಳೆಸಿ ಉಸಿರು ಉಳಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಡಿಸಿಎ್​ ಹುಸೇನ್​ ಬಾಷಾ ಸೂಚನೆ
ಕೊಪ್ಪಳ : ಜಿಲ್ಲೆಯಲ್ಲಿ ಕೇವಲ 6 ಪರ್ಸೆಂಟ್​ ಪರಿಸರವಿರುವುದರಿಂದ ಬಿಸಿ ತಾಪಮಾನ ಹೆಚ್ಚಾಗಿದೆ. ಉತ್ತಮ ಪರಿಸರ ಬೆಳೆಸಿದರೆ ಮಾತ್ರ ಉಸಿರು ಉಳಿಸಿಕೊಳ್ಳಲು ಸಾಧ್ಯ ಎಂದು ಜಿಲ್ಲಾ ಉಪ ಅರಣ್ಯ ಅಧಿಕಾರಿ ಹುಸೇನ್​ ಬಾಷಾ ಹೇಳಿದರು.
ತಾಲೂಕಿನ ಹೊರ್ತಟ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 150 ಸಸಿಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆ, ಸಾರ್ವಜನಿಕರ ಸ್ಥಳಗಳು, ಊರಿನ ರಸ್ತೆ, ಮನೆಯ ಮುಂದೆ, ಹೊಲಗಳಲ್ಲಿ ಹೀಗೆ ಎಲ್ಲಾ ಕಡೆ ಮರಗಳನ್ನು ಬೆಳೆಸುತ್ತಾ ಹೋದರೆ ಪರಿಸರ ಸಂರಕಸಿ, ಉತ್ತಮ ನಾಡನ್ನ ಕಟ್ಟಬಹುದು. ಶಾಲೆಯು ಉತ್ತಮವಾದ ಮೈದಾನ ಹೊಂದಿದೆ ತಾವೆಲ್ಲರೂ ಪರಿಸರವನ್ನ ಕಾಪಾಡಿ ಎಂದರು.
ವಲಯ ಅರಣ್ಯ ಅಧಿಕಾರಿ ಗುರುನಗೌಡ ಪಾಟೀಲ್​ ಮಾತನಾಡಿ, ಪರಿಸರ ಜಾಗೃತಿ ನಮ್ಮೆಲ್ಲರ ಹೊಣೆ ನಾಡು ಬೆಳೆಸಿ ಕಾಡು ಉಳಿಸಿ, ಪರಿಸರ ಇರದಿದ್ದರೆ ನಾವ್ಯಾರೂ ಇರೋದಿಲ್ಲ ಹೀಗಾಗಿ ತಾವೆಲ್ಲರೂ ಶಾಲೆಯ ಮೈದಾನದಲ್ಲಿ ಉತ್ತಮ ಗಿಡಗಳನ್ನು ಬೆಳೆಸುವುದರೊಂದಿಗೆ ಮುಂದಿನ ದಿನಮಾನಗಳಲ್ಲಿ ಪರಿಸರ ಸಂರಕ್ಷಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಲೆ ಮುಖ್ಯ ಶಿಕ್ಷಕ ಬಸನಗೌಡ ಮರೆಗಡ್​ ಮಾತನಾಡಿ, ಸುಂದರ ಶಾಲೆ ಸುಂದರ ಪರಿಸರ ಎನ್ನುವ ನಾಣ್ನುಡಿಯಂತೆ. ಸರ್ಕಾರಿ ಶಾಲೆಯಲ್ಲಿ ಪ್ರತಿ ತಾಯಿ ಹೆಸರಿನಲ್ಲಿ ಒಂದೊಂದು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅದರಂತೆ ತಾವೆಲ್ಲರೂ ಕೂಡ ನಿಮ್ಮ ನಿಮ್ಮ ತಾಯಿ ಹೆಸರಲ್ಲಿ ಒಂದು ಗಿಡಗಳನ್ನು ನೀಡಬೇಕು ಎಂದರು.
ಎಸ್​ಡಿಎಂಸಿ ಅಧ್ಯಕ್ಷ ಹನುಮಪ್ಪ ಕುಟುಗುನಳ್ಳಿ, ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹನುಮಸಾಗರ ಇತರರಿದ್ದರು