ಯಲಬುರ್ಗಾದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ಮಳೆಗಾಗಿ ಪ್ರಾರ್ಥಿಸಿ ಅವಳಿ ತಾಲೂಕಿನ ರೈತ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿದರು. ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲಿ, ಜಿಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ, ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ ಇತರರಿದ್ದರು. Office-bearers of the Twin Taluk Farmers' Protection Committee offered special prayers for rain
- ರೈತ ಸಂರಕ್ಷಣಾ ಸಮಿತಿಯಿಂದ ಅಭಿಷೇಕ
- ಪ್ರಾರ್ಥಿಸಿ ವಿಶೇಷ ಪೂಜೆ
ಯಲಬುರ್ಗಾ: ಪಟ್ಟಣದ ಶ್ರೀ ಮೊಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಮಳೆಗಾಗಿ ಪ್ರಾರ್ಥಿಸಿ ಅವಳಿ ತಾಲೂಕು ರೈತ ಸಂರಕ್ಷಣಾ ಸಮಿತಿ ಪದಾಧಿಕಾರಿಗಳಿಂದ ಬಸವೇಶ್ವರ ಮೂರ್ತಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು.
ಮುಧೋಳ, ಬಿನ್ನಾಳ, ಮಸಬಹಂಚಿನಾಳ, ಕುಕನೂರು, ಗುದ್ನೆಪ್ಪನಮಠ, ಮಂಗಳೂರು, ಗುತ್ತೂರು, ಚಿಕ್ಕಮ್ಯಾಗೇರಿ ಗ್ರಾಮದ ಆರಾಧ್ಯ ದೇವರಿಗೆ ತಲಾ 51 ತೆಂಗಿನಕಾಯಿ ಒಡೆದು ಕ್ಷೇತ್ರಕ್ಕೆ ಮಳೆ ಬರುವಂತೆ ಪ್ರಾರ್ಥಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಎಂಎಫ್ ನಿರ್ದೇಶಕ ಹಂಪಯ್ಯಸ್ವಾಮಿ ಹಿರೇಮಠ ಮಾತನಾಡಿ, ಅವಳಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತಿದ ಬೆಳೆ ಒಣಗುತ್ತಿವೆ. ಹೀಗಾಗಿ ಸಮಿತಿಯಿಂದ ಕ್ಷೇತ್ರದ 9 ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮಳೆ ಅಭಾವದಿಂದ ಬೆಳೆಗಳು ಹಾಲಾಗುತ್ತಿದ್ದು, ಸರ್ಕಾರ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರಗೌಡ ಉಳ್ಳಾಗಡ್ಡಿ, ರೈತ ಸಂರಕ್ಷಣಾ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲಿ, ಜಿಪಂ ಮಾಜಿ ಸದಸ್ಯ ಕೆರಿಬಸಪ್ಪ ನಿಡಗುಂದಿ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ, ಆರೋಗ್ಯ ರಕ್ಷಾ ಸಮಿತಿ ಉಪಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ, ಪ್ರಮುಖರಾದ ಶರಣಪ್ಪ ಗಾಂಜಿ, ಸಿಎಂ ಈಶ್ವರ ಅಟಮಾಳಗಿ, ಸಾವಿತ್ರಿ ಗೊಲ್ಲರ, ಗಿರಿಜಾ ಸಂಗಟಿ, ಶರಣಮ್ಮ ಪೂಜಾರ, ಜಯಶ್ರೀ ಕಂದಕೂರು, ಸಂಗಣ್ಣ ತೆಂಗಿನಕಾಯಿ, ಎಂ.ಎಫ್. ನದಾಫ್, ಛತ್ರಪ್ಪ ಛಲವಾದಿ, ಕಳಕಪ್ಪ ಕುರಿ ಇತರರಿದ್ದರು.