ಶ್ರೀರಾಮನಗರದ 6ನೇ ವಾರ್ಡ್ ಶ್ರೀ ಮಾರೆಮ್ಮದೇವಿ ದೇವಾಲಯದ 8ನೇ ವಾರ್ಷಿಕೋತ್ಸವ ನಿಮಿತ್ತ ಹಮ್ಮಿಕೊಂಡ ಜಾತ್ರಾಮಹೋತ್ಸವದಲ್ಲಿ ವೆಂಕಟಗಿರಿ ಶಾಖಮಠದ ರೌಡಕುಂದಾ ಸಿದ್ರಾಮೇಶ್ವರ ಶರಣರು ಮಾತನಾಡಿದರು. ಪ್ರಮುಖರಾದ ಎಚ್.ಎಂ.ಸಂಗಯ್ಯತಾತಾ, ಪಂಚಾಕ್ಷರಯ್ಯ ಹಿರೇಮಠ, ಪವನಕುಮಾರ, ಚೆನ್ನುಪಾಟಿ ಪ್ರಭಾಕರ ಇತರರಿದ್ದರು. 
ಕೊಪ್ಪಳ

ಮಳೆ-ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪೂರ್ಣಕುಂಭ
  • ಕಲಶ
  • ವಾದ್ಯ
ಗಂಗಾವತಿ: ತಾಲೂಕಿನ ಶ್ರೀರಾಮನಗರದ 6ನೇ ವಾರ್ಡ್ ಶ್ರೀ ಮಾರೆಮ್ಮದೇವಿ ದೇವಾಲಯದ 8ನೇ ವಾರ್ಷಿಕೋತ್ಸವ ನಿಮಿತ್ತ ಜಾತ್ರಾಮಹೋತ್ಸವ ಸೋಮವಾರ ನಡೆಯಿತು.
ಬೆಳಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ, ಕುಂಕುಮಾರ್ಚನೆ, ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಲಾಯಿತು. ಪೂರ್ಣಕುಂಭ, ಕಲಶ ಮತ್ತು ವಾದ್ಯ ಮೇಳದೊಂದಿಗೆ ಗಂಗೆ ಸ್ಥಳಕ್ಕೆ ಹೋಗಿ ಪೂಜೆ ನೆರವೇರಿಸಲಾಯಿತು. ನಂತರ ಸಾಮೂಹಿಕ ಭಜನೆ ಮತ್ತು ಅನ್ನಸಂತರ್ಪಣೆ ನಡೆಯಿತು.
ಸಾನ್ನಿಧ್ಯವಹಿಸಿದ್ದ ವೆಂಕಟಗಿರಿ ಶಾಖಾಮಠದ ರೌಡಕುಂದಾ ಸಿದ್ರಾಮೇಶ್ವರ ಶರಣರು ಮಾತನಾಡಿ, ಭಕ್ತಿ ಇಲ್ಲದ ಪೂಜೆ, ಹಸಿವಿಲ್ಲದ ಊಟ ವ್ಯರ್ಥವಾಗಲಿದ್ದು, ಮಳೆ ಮತ್ತು ಬೆಳೆಗಾಗಿ ಸರ್ವರು ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಮುಖರಾದ ಜಿ.ರಾಮಕೃಷ್ಣ, ಅನ್ನೇಶೇಖರ, ಕರಟೂರಿ ಶ್ರೀನಿವಾಸ, ಬಾಪಾರಾವ್, ದೇವಾಲಯ ಸಮಿತಿ ಪ್ರತಿನಿಧಿಗಳಾದ ಶೇಖರ, ಗೋಪಿ, ಮಾರೆಪ್ಪ, ಪರಮೇಶಪ್ಪ, ನಾಗೇಶ ರೆಡ್ಡಿ ಇತರರಿದ್ದರು.