ಕೊಪ್ಪಳದ ಖಾಸಗಿ ಹೋಟೆಲ್​ನಲ್ಲಿ ಅಖಿಲ ಭಾರತ ಜೀವ ವಿಮಾ ಸಂಘಟನೆಯಿಂದ ಆಯೋಜಿಸಿದ್ದ ರಾಯಚೂರು ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್​ಐಸಿ ರಾಯಚೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪ್ರಸಾದ ಬಸವರಾಜ ಮಾತನಾಡಿದರು. ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಬಿ. ಶ್ರೀನಿವಾಸ, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕಾಂ. ಎಲ್​. ಮಂಜುನಾಥ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅರಳಿ ವಿರಣ್ಣ, ಗೌರವಾಧ್ಯಕ್ಷ ದೊಡ್ಡನಗೌಡ ಪಾಟೀಲ, ರಾಯಚೂರು ವಿಭಾಗದ ಅಧ್ಯಕ್ಷ ಕಾಂ. ಶಿವರಾಜ ಪತ್ತೆಪುರ ಇದ್ದರು. 
ಕೊಪ್ಪಳ

ಆಧುನಿಕ ತಂತ್ರಜ್ಞಾನದಿಂದ ಗ್ರಾಹಕರಿಗೆ ತ್ವರಿತ ಸೇವೆ

ಪ್ರಮುಖ ಮುಖ್ಯಾಂಶಗಳು

  • ಪ್ರಸಾದ ಬಸವರಾಜ ಭರವಸೆ
ಕೊಪ್ಪಳ : ಜೀವ ವಿಮಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ತಾಂತ್ರಿಕ ಬದಲಾವಣೆಗಳು ಆಗುತ್ತಿದ್ದು, ಎಲ್​ಐಸಿ ಸಂಸ್ಥೆಯು ಅತ್ಯಾಧುನಿಕ ಡಿಜಿಟಲ್​ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪಾಲಿಸಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಸನ್ನದ್ಧವಾಗಿದೆ ಎಂದು ಎಲ್​ಐಸಿ ರಾಯಚೂರು ವಿಭಾಗದ ಹಿರಿಯ ವಿಭಾಗಾಧಿಕಾರಿ ಪ್ರಸಾದ ಬಸವರಾಜ ಹೇಳಿದರು.
ನಗರದ ಖಾಸಗಿ ಹೋಟೆಲ್​ನಲ್ಲಿ ಬುಧವಾರ ಅಖಿಲ ಭಾರತ ಜೀವ ವಿಮಾ ಸಂಘಟನೆಯಿಂದ ಆಯೋಜಿಸಿದ್ದ ರಾಯಚೂರು ವಿಭಾಗೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.
ವಿಮಾ ಪ್ರತಿನಿಧಿಗಳು ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಮೂಲಕ ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು. ಗ್ರಾಹಕರ ವಿಶ್ವಾಸವನ್ನು ಗಳಿಸುವುದರ ಜತೆಗೆ ಸಂಸ್ಥೆಯ ಗುರಿ ಸಾಧನೆಗೆ ಶ್ರಮಿಸಬೇಕು. ಸಂಘಟನೆಯ ಒಗ್ಗಟ್ಟಿನ ಮೂಲಕ ಪ್ರತಿನಿಧಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಯಚೂರು ವಿಭಾಗದ ಅಧ್ಯಕ್ಷ ಕಾಂ. ಶಿವರಾಜ ಪತ್ತೆಪುರ ಮಾತನಾಡಿ, ದೇಶದ ಅತಿದೊಡ್ಡ ಸಾರ್ವಜನಿಕ ವಿಮಾ ಸಂಸ್ಥೆಯಾದ ಎಲ್​ಐಸಿಯನ್ನು ಉಳಿಸಿ ಬೆಳೆಸಲು ವಿಮಾ ಪ್ರತಿನಿಧಿಗಳ ಹಿತರಕ್ಷಣೆ ಅತ್ಯಗತ್ಯವಾಗಿದೆ. ಪ್ರತಿನಿಧಿಗಳ ಹಕ್ಕುಗಳನ್ನು ಕಾಪಾಡಿದಾಗ ಮಾತ್ರ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳು ಮತ್ತು ನೀತಿ ಬದಲಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯ ಸಮಿತಿ ಕಾರ್ಯಾಧ್ಯಕ್ಷ ಬಿ. ಶ್ರೀನಿವಾಸ, ಕೇಂದ್ರ ಸಮಿತಿ ಕಾರ್ಯಾಧ್ಯಕ್ಷ ಕಾಂ. ಎಲ್​. ಮಂಜುನಾಥ, ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅರಳಿ ವಿರಣ್ಣ, ಗೌರವಾಧ್ಯಕ್ಷ ದೊಡ್ಡನಗೌಡ ಪಾಟೀಲ, ವಲಯ ಖಜಾಂಚಿ ವಲಿ ಮೊಹಿದ್ದೀನ್​, ಪ್ರಮುಖರಾದ ವಿ.ಎಸ್​. ಪಾಟೀಲ, ಮಹಾಂತೇಶ ತೊಂಡಿಹಾಳ, ಶಿವಪುತ್ರಪ್ಪ ಅಬ್ಬಿಗೇರಿ, ಶಿವಪ್ಪ ತೆಂಗಿನಕಾಯಿ, ಎಸ್​.ಆರ್​. ಹಿರೇಮಠ, ಹನುಮಂತ ಕಟ್ಟಿಮನಿ ಇತರರಿದ್ದರು.