ಯಲಬುರ್ಗಾ ತಾಲೂಕು ಬಣಜಿಗ ಸಮಾಜದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಪ್ರಭುದೇವ ಎಸ್.ಹೊಸಂಗಡಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಪ್ರಮುಖರಾದ ಬಸವರಾಜ ಕಜ್ಜಿ, ಸಂಗಣ್ಣ ಕರಂಡಿ, ಸಂಗಣ್ಣ ಟೆಂಗಿನಕಾಯಿ, ವಿಜಯಕುಮಾರ ಕರಂಡಿ ಇತರರಿದ್ದರು. 
ಕೊಪ್ಪಳ

ಬಣಜಿಗ ಸಂಘಕ್ಕೆ ಪ್ರಭುದೇವ ಅಧ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಶೇಖರಪ್ಪ ಕರಂಡಿ ಗೌರವಾಧ್ಯಕ್ಷ
ಯಲಬುರ್ಗಾ: ಪಟ್ಟಣದ ಬಣಜಿಗ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಪ್ರಭುದೇವ ಎಸ್.ಹೊಸಂಗಡಿ ಅಧ್ಯಕ್ಷ, ಶೇಖರಪ್ಪ ಕರಂಡಿ ಗೌರವಾಧ್ಯಕ್ಷ, ವೀರಣ್ಣ ತಮ್ಮಿನಾಳ ಉಪಾಧ್ಯಕ್ಷ ಹಾಗೂ ಕುಮಾರ ಚಿನಿವಾಲರ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ಸಮಾಜದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಪ್ರಮುಖರಾದ ಬಸವರಾಜ ಕಜ್ಜಿ, ಸಂಗಣ್ಣ ಕರಂಡಿ, ಸಂಗಣ್ಣ ಟೆಂಗಿನಕಾಯಿ, ವಿಜಯಕುಮಾರ ಕರಂಡಿ, ಗವಿಸಿದ್ದಪ್ಪ ಚೋಳಿನ, ಉಮೇಶ ತಮ್ಮಿನಾಳ, ಪ್ರದೀಪ ಕರಂಡಿ ಇತರರಿದ್ದರು.