ಗಂಗಾವತಿ ಗಾಂಧಿ ವೃತ್ತದ ಬಳಿಯ ಲಾಡ್ಜ್‌ವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ನಗರಸಭೆ ಅಧಿಕಾರಿಗಳ ತಂಡ ಸೋಮವಾರ ವಶಪಡಿಸಿಕೊಂಡಿರುವುದು. ಪರಿಸರ ಇಂಜಿನಿಯರ್ ಶರಣಪ್ಪ, ಆರೋಗ್ಯ ನಿರೀಕ್ಷಕ ಎ.ನಾಗರಾಜ್, ಪಿಎಸೈ ನಾಗರಾಜ್ ಇತರರಿದ್ದರು.
- ನಗರಸಭೆ ಅಧಿಕಾರಿಗಳ ತಂಡದಿಂದ ದಾಳಿ
ಗಂಗಾವತಿ: ನಗರದ ಗಾಂಧಿ ವೃತ್ತದ ಬಳಿಯ ಲಾಡ್ಜ್‌ವೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ನಗರಸಭೆ ಅಧಿಕಾರಿಗಳ ತಂಡ ಸೋಮವಾರ ವಶಪಡಿಸಿಕೊಂಡಿತು.
ಅಖಿಲ ಕರ್ನಾಟಕ ರಾಜಕುಮಾರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಖಾದರ್‌ಬಾಷಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್‌ರೊಂದಿಗೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳ ತಂಡ, ಲಾಡ್ಜ್‌ನ ರೂಮವೊಂದರಲ್ಲಿದ್ದ ಪ್ಲಾಸ್ಟಿಕ್ ತಟ್ಟೆಗಳು, ಕವರ್‌ಗಳು, ಗ್ಲಾಸ್‌ಗಳು ಸೇರಿ ಇತರ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಅದರಂತೆ ಒಎಸ್‌ಬಿ ರಸ್ತೆಯ ಗೋದಾಮಿನಲ್ಲಿದ್ದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ವಶಪಡಿಸಿಕೊಂಡಿದೆ. ಸಂಗ್ರಹಿಸಿಟ್ಟಿದ್ದ ಸ್ಟೇಷನರಿ ಅಂಗಡಿ ಮಾಲೀಕ ದಿನೇಶ ವಿರುದ್ಧ ಪ್ರಕರಣ ದಾಖಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಈ ಬಗ್ಗೆ ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿ, ಸಂಘಟನೆಗಳು ನೀಡಿದ ದೂರಿನ ಅನ್ವಯ ದಾಳಿ ನಡೆಸಿದಾಗ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳು ದೊರೆತಿವೆ. ಎಲ್ಲವನ್ನೂ ಜಪ್ತಿ ಮಾಡಲಾಗಿದ್ದು, ಮಾಲೀಕ ದಿನೇಶ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು. ನಗರ ಪಿಎಸೈ ಜಿ.ಟಿ.ನಾಗರಾಜ್, ಆರೋಗ್ಯ ನಿರೀಕ್ಷಕ ಎ.ನಾಗರಾಜ್ ಇತರರಿದ್ದರು.
ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ಪ್ರೇರಿತ ವಸ್ತುಗಳನ್ನು ನಗರಸಭೆ ನಿಷೇಧಿಸಿದ್ದು, ಮಾರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದರೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸುವ ಬಗ್ಗೆ ಜೆಎಂಎ್ಸಿ ನ್ಯಾಯಾಧೀಶರು ಸಭೆ ಮೂಲಕ ಅಧಿಕಾರಿಗಳಿಗೆ ಸೂಚಿಸಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ವಸ್ತುಗಳನ್ನು ಲಾಡ್ಜ್‌ನಲ್ಲಿ ಶೇಖರಿಸಿಟ್ಟಿರುವುದು ಅನುಮಾನಕ್ಕೆ ಕಾರಣವಾಗಿದ್ದು, ದೊಡ್ಡ ಪ್ರಮಾಣದ ಮಾಫಿಯಾ ಎನ್ನಲಾಗುತ್ತಿದೆ.