ಗಂಗಾವತಿ ತಾಲೂಕಿನ ಹನುಮನಹಳ್ಳಿಯ ರೆಸಾರ್ಟ್‌ನಲ್ಲಿದ್ದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಗ್ರಾಪಂ ಸಿಬ್ಬಂದಿ ಸೋಮವಾರ ವಶಪಡಿಸಿಕೊಂಡಿತು. ಪಿಡಿಒ ವತ್ಸಲಾ, ಸಾಹಸ ಸಂಸ್ಥೆ ಪ್ರತಿನಿಧಿಗಳಾದ ಸಂಪತ್ ಕುಮಾರ, ಜೋಗದ ಮಂಜುನಾಥ, ಗ್ರಾಪಂ ನೌಕರರಾದ ಕಿರಣಮ್ಮ ಇತರರಿದ್ದರು.
ಗಂಗಾವತಿ: ತಾಲೂಕಿನ ಹನುಮನಹಳ್ಳಿ ಮತ್ತು ವಿರುಪಾಪುರ ಗಡ್ಡಿಯಲ್ಲಿನ ಅಂಗಡಿಗಳಲ್ಲಿ ಗ್ರಾಪಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ 26.5 ಕೆಜಿ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಸೋಮವಾರ ವಶಪಡಿಸಿಕೊಂಡಿದ್ದಾರೆ.
ಏಕ ಬಳಕೆ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ಅಂಗಡಿ, ರೆಸಾರ್ಟ್, ಹೋಟೆಲ್ ಸೇರಿ ವಿವಿಧ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್‌ನಿಂದಾಗುತ್ತಿರುವ ಪರಿಸರ ಮತ್ತು ಆರೋಗ್ಯದ ಮೇಲಿನ ಪರಿಣಾಮ ಕುರಿತು ಜಾಗೃತಿ ಮೂಡಿಸಿದರು. ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ವಶಪಡಿಸಿಕೊಂಡರಲ್ಲದೇ, ನೋಟಿಸ್ ಜಾರಿ ಮಾಡಿದರು. ಕೆಲ ಅಂಗಡಿಗಳಿಗೆ ದಂಡ ಹಾಕಿದರು.
ಸಣಾಪುರ ಗ್ರಾಪಂ ಪಿಡಿಒ ವತ್ಸಲಾ ಮಾತನಾಡಿ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಪ್ರೇರಿತ ವಸ್ತುಗಳನ್ನು ಬಳಸದಂತೆ ಈಗಾಗಲೇ ಹಲವು ಬಾರಿ ಜಾಗೃತಿ ಮೂಡಿಸಿದ್ದು, ನೋಟಿಸ್ ನೀಡಲಾಗಿತ್ತು. ಮೊದಲ ಹಂತದಲ್ಲಿ ವಶಪಡಿಸಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ಪ್ರಕರಣ ದಾಖಲು ಜತೆಗೆ ಉದ್ಯಮ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಾಹಸ ಸಂಸ್ಥೆ ಪ್ರತಿನಿಧಿಗಳಾದ ಸಂಪತ್ ಕುಮಾರ, ಜೋಗದ ಮಂಜುನಾಥ, ಗ್ರಾಪಂ ಸಿಬ್ಬಂದಿ ಕಿರಣಮ್ಮ ಸೇರಿ ಎನ್‌ಆರ್‌ಎಲ್‌ಎಂ ಯೋಜನೆ ಸಿಬ್ಬಂದಿ ಇದ್ದರು.