ಕೊಪ್ಪಳದಲ್ಲಿ ಶುಕ್ರವಾರ ನಡೆದ ಬಣಜಿಗ ಸಮುದಾಯದ ಸಂಸ್ಥಾಪನಾ ದಿನಾಚರಣೆ ಹಾಗೂ ಗುರುಬಸವ ಬಣಜಿಗರ ಭವನದ ಭೂಮಿ ಪೂಜೆ ಮತ್ತು ಅಡಿಗಲ್ಲು ಸಮಾರಂಭವನ್ನು ರಾಮದುರ್ಗಾ ಶಾಸಕ ಅಶೋಕ ಪಟ್ಟಣ್ಣವರ ಉದ್ಘಾಟಿಸಿದರು. ಹುಬ್ಬಳ್ಳಿ ಶಾಸಕ ಮಹೇಶ ತೆಂಗಿನಕಾಯಿ, ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡದ, ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ ಇತರರಿದ್ದರು.
- ಶಾಸಕ ಅಶೋಕ ಪಟ್ಟಣ್ಣವರ
- ಗುರುಬಸವ ಭವನ ಅಡಿಗಲ್ಲು ಸಮಾರಂಭ
ಕೊಪ್ಪಳ : ಸಮಾಜದ ಏಳಿಗೆ ಹಾಗೂ ಇಂದಿನ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮೌಲಿಕ ವಿಚಾರಗಳನ್ನು ಹಂಚಿಕೊಂಡು. ಇಂದಿನ ದಿನಗಳಲ್ಲಿ ಉತ್ತಮ ಸಮಾಜ ನಿಮಾರ್ಣಕ್ಕೆ ರಾಜಕೀಯದಲ್ಲಿ ಸುಶಿಕ್ಷಿತರ ಅವಶ್ಯಕತೆ ಬಹಳಷ್ಟಿದೆ. ಮಹಿಳೆಯರು ಮತ್ತು ಸಮಾಜದ ನಾಗರಿಕರು ನಮ್ಮ ಸಮುದಾಯದ ಮೇಲೆತ್ತುವ ಕಾರ್ಯಮಾಡಬೇಕು ಎಂದು ವಿಧಾನಸಭೆಯ ಮುಖ್ಯ ಸಚೇತಕ ಮತ್ತು ರಾಮದುರ್ಗ ಶಾಸಕ ಅಶೋಕ ಪಟ್ಟಣ್ಣವರ ತಿಳಿಸಿದರು.
ನಗರದಲ್ಲಿ ಶುಕ್ರವಾರ ಬಣಜಿಗ ಸಮಾಜದ ಸಂಸ್ಥಾಪನಾ ದಿನಾಚರಣೆ ಹಾಗೂ ಗುರುಬಸವ ಬಣಜಿಗರ ಭವನದ ಭೂಮಿ ಪೂಜೆ ಮತ್ತು ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದರು.
ಬಣಜಿಗ ಸಮುದಾಯವು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ, ಸಮಾಜಕ್ಕೆ ಆರ್ಥಿಕ ಶಿಕ್ಷಣ ನೀಡಿದ ಕೈಯಾಗಿದೆ. ನಮ್ಮ ಸಮುದಾಯದಿಂದ ಅನೇಕರು ತಮ್ಮ ಸ್ವಂತ ವ್ಯಕ್ತಿತ್ವದಿಂದ ಮುಖ್ಯಮಂತ್ರಿಗಳಾಗಿ ಹೊರಹೊಮ್ಮಿದ್ದಾರೆ. ಇಂದಿನ ರಾಜಕೀಯದಲ್ಲಿ ಮೌಲ್ಯಗಳ ಕುಸಿತವಾಗುತ್ತಿದ್ದು, ಸೂಕ್ಷ$್ಮವಾಗಿ ಯೋಚಿಸಿ ಕೆಲಸ ಮಾಡುವ ಅನಿವಾರ್ಯತೆ ಇದೆ. ಭವನ ನಿಮಾರ್ಣಕ್ಕೆ ವೈಯಕ್ತಿಕವಾಗಿ ಉತ್ತಮ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಹುಬ್ಬಳ್ಳಿ ಶಾಸಕ ಮಹೇಶ ತೆಂಗಿನಕಾಯಿ ಮಾತನಾಡಿ, ಪ್ರಸ್ತುತ ರಾಜಕೀಯ ವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇಂದು ವಿಧಾನಸೌಧದಲ್ಲಿ ಕೆಟ್ಟ ಪರಿಸ್ಥಿತಿ ನಿಮಾರ್ಣವಾಗಿದೆ. ಭಗವಂತ ಖಾಕಿಗೆ, ಖಾದಿಗೆ ಮತ್ತು ಕಾವಿಗೆ ಒಬ್ಬರಿಗೆ ಒಂದು ಸ್ಥಾನಮಾನವನ್ನು ನೀಡಿದ್ದಾನೆ. ನಾವೆಲ್ಲರೂ ಕಾವಿಯನ್ನು ನೆಚ್ಚಿ ಕೆಲಸ ಮಾಡುವಂತವಾರಾಗಬೇಕು. ಸಮಾಜ ಸುಧಾರಣೆ ಮಾಡಬೇಕೆಂದರೆ. ಒಳ್ಳೆಯ ವಿದ್ಯಾವಂತರು ರಾಜಕೀಯಕ್ಕೆ ಬರಬೇಕು. ಸುಶಿಕ್ಷಿತರು ರಾಜಕೀಯಕ್ಕೆ ಬರದಿದ್ದರೆ ಗುಂಡಾಗಳು ಬಂದು ವಿಧಾನಸೌಧವನ್ನೇ ಮಾರಾಟ ಮಾಡುವ ಸ್ಥಿತಿ ಬರಬಹುದು. ಜಾತಿ-ಪಂಗಡಗಳ ಭೇದ ಮರೆತು ಹಿಂದು ಸಮಾಜ ಒಟ್ಟಾಗಬೇಕು, ಎಂದರು.
ಸಮಾಜವನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸವಾಗಬೇಕು. ಇಂದಿನ ದಿನಗಳಲ್ಲಿ ಬಹಳಷ್ಟು ಒಳ ಪಂಗಡಗಳು ಹುಟ್ಟಿಕೊಳ್ಳುತ್ತಿವೆ. ಹಾಗಾಗಬಾರದು. ಎಲ್ಲಿ ಸುಧಾರಣೆ ತರಲು ಸಾಧ್ಯವಿದೆ ಅಲ್ಲಿ ನಾವು ಸುಧಾರಣೆ ತರುವಂತಹ ಕೆಲಸ ಮಾಡಬೇಕು. ನಮ್ಮಸಮುದಾಯದ ಗುರುಬಸವ ಭವನದ ನಿಮಾರ್ಣಕ್ಕೆ 2ಕೋಟಿ ರೂ. ಅನುದಾನ ನೀಡಿರುವ ರಾಘವೇಂದ್ರ ಹಿಟ್ನಾಳವರನ್ನು ಅಭಿನಂದಿಸಿದರು. ಸುಮಾರು 8 ಕೋಟಿ ರೂ. ವೆಚ್ಚದ ಈ ಭವನವು ಕೇವಲ ಕಟ್ಟಡವಾಗದೆ ಮಾರ್ಗದರ್ಶನ ನೀಡುವ ಕೇಂದ್ರವಾಗಲಿ ಎಂದು ಆಶಿಸಿದರು.
ಭವನಕ್ಕೆ ಎರಡು ಕೋಟಿ ಅನುದಾನ
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, 2004ರಲ್ಲಿ ಕೊಪ್ಪಳದಲ್ಲಿ ನೋಂದಣಿಯಾದ ಈ ಸಂಘ ಇಂದು ರಾಜ್ಯಮಟ್ಟದಲ್ಲಿ ಬೆಳೆದಿರುವುದು ಹೆಮ್ಮೆಯ ವಿಫಿಯ. ಈ ಭವನಕ್ಕೆ ನಾನು 2 ಕೋಟಿ ರೂ. ಅನುದಾನ ನೀಡುತ್ತೇನೆ. ಈಗಾಗಲೇ 1 ಕೋಟಿ ರೂ. ನೀಡಲಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಮತ್ತೊಂದು ಕೋಟಿ ರೂ. ನೀಡುವುದಾಗಿ ಘೋಷಿಸಿದರು. ಎಲ್ಲಾ ಜನಪ್ರತಿನಿಧಿಗಳು ಒಟ್ಟಾಗಿ ಈ ಭವನವನ್ನು ಪೂರ್ಣಗೊಳಿಸೋಣ ಎಂದರು.
ಒಳ್ಳೆಯ ಕೆಲಸಕ್ಕೆ ಅಡ್ಡಗಾಲು ಹಾಕುವವರ ಮಧ್ಯೆ, ಅಡಿಗಲ್ಲು ಹಾಕುವ ಈ ಕಾರ್ಯಕ್ರಮ ಸಂತಸ ತಂದಿದೆ, ಎಂದು ಹರಸಿದರು.
ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡದ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಮೈನಳ್ಳಿ, ಹಾಗೂ ಡಾ. ಬಸವರಾಜ ಕ್ಯಾವಕ್ಟರ್, ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಬುಳ್ಳಾ ಇತರರಿದ್ದರು.