ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯ ಸಬಲೀಕರಣ ಎಂಬ ಘೋಷವಾಕ್ಯದಡಿ ನಡೆದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಸಮಾವೇಶದಲ್ಲಿ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಮಾತನಾಡಿದರು. ಉಪಾಧ್ಯಕ್ಷ ಹಬಿಬುಲ್ಲಾ ಖಾನ್, ರಾಜ್ಯ ಮಹಿಳಾ ಅಧ್ಯಕ್ಷೆ ಸಬಿಹಾ ಪಟೇಲ್, ರಾಜ್ಯ ಮಹಿಳಾ ಕಾರ್ಯದರ್ಶಿ ತಲತ್ ಯಾಸ್ಮಿನ್, ಪದಾಧಿಕಾರಿಗಳಾದ ಇರ್ಫಾನ್, ರಾಜಾ ನಾಯಕ ಇದ್ದರು.
ಕೊಪ್ಪಳ : ಸಾಮಾಜಿಕ ನ್ಯಾಯ, ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ ಹಾಗೂ ಹಿಂದುಳಿದ ಸಮುದಾಯಗಳಿಗೆ ಸಮರ್ಪಕ ರಾಜಕೀಯ ಪ್ರತಿನಿಧಿತ್ವ ದೊರಕಬೇಕಾದ ಅಗತ್ಯವಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ಹೇಳಿದರು.
ನಗರದ ಮುಸ್ಲಿಂ ಶಾದಿ ಮಹಲ್ನಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದಿಂದ ಸಾಮಾಜಿಕ ನ್ಯಾಯಕ್ಕಾಗಿ ರಾಜಕೀಯ ಸಬಲೀಕರಣ ಎಂಬ ಘೋಷವಾಕ್ಯದಡಿ ಇತ್ತೀಚೆಗೆ ನಡೆದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.
ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಆದರೆ ಪ್ರಸ್ತುತ ರಾಜಕೀಯ ವ್ಯವಸ್ಥೆ ಹಾಗೂ ಕೆಲವು ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ಳುವ ಪ್ರಯತ್ನ ನಡೆಸುತ್ತಿವೆ. ಸಮಾಜದ ಎಲ್ಲ ವರ್ಗಗಳ ಸಬಲೀಕರಣಕ್ಕಾಗಿ ರಾಜಕೀಯ ಜಾಗೃತಿ, ಸಂಘಟಿತ ಹೋರಾಟ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದ ಒಂದು ದೊಡ್ಡ ಸಮುದಾಯವನ್ನು ಅದರ ಮೂಲಭೂತ ಹಕ್ಕುಗಳಿಂದ ವಂಚಿತರನ್ನಾಗಿ ಮಾಡಿದರೆ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದ ಅವರು, ಹಿಂದುಳಿದ ವರ್ಗಗಳು ರಾಜಕೀಯವಾಗಿ ಸಬಲಗೊಳ್ಳುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಹಬಿಬುಲ್ಲಾ ಖಾನ್, ರಾಜ್ಯ ಮಹಿಳಾ ಅಧ್ಯಕ್ಷೆ ಸಬಿಹಾ ಪಟೇಲ್, ರಾಜ್ಯ ಮಹಿಳಾ ಕಾರ್ಯದರ್ಶಿ ತಲತ್ ಯಾಸ್ಮಿನ್, ಪದಾಧಿಕಾರಿಗಳಾದ ಇರ್ಫಾನ್, ರಾಜಾ ನಾಯಕ, ಅಬ್ದುಲ್ ಮಲಿಕ್, ಜುನೆದ್ ಉಮಚ್ಗಿ, ಆದಿಲ್ ಪಟೇಲ್, ಮುಹಮ್ಮದ್ ಅನ್ಸರ್, ಸಲಿಮಾ ಜಹಾನ್, ಮಹಬೂಬ್ ಇತರರಿದ್ದರು.